ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಬೆಳಗ್ಗೆ 11 ಗಂಟೆಗೆ 2020ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. 7ನೇ ಬಾರಿ ಬಜೆಟ್ ಮಂಡಿಸುತ್ತಿರುವ ಬಿಎಸ್‍ವೈ ಅವರ ಜನಪ್ರಿಯ ಘೋಷಣೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಹೊಸ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ಘೋಷಣೆಯಾಗುವ ಸಾಧ್ಯತೆಗಳಿಲ್ಲ. ಆದ್ರೂ ಕೃಷಿ, ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ಕಳೆದ ಬಾರಿ 2.34 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಬಿಎಸ್‍ವೈ ಮಂಡಿಸಿದ್ದರು. ಈ ಬಾರಿ ಬಜೆಟ್ ಗಾತ್ರ 2.50 ಲಕ್ಷ ಕೋಟಿ ರೂ ಗಡಿ ದಾಟುವ ನೀರಿಕ್ಷೆ ಇದೆ. ಎಲ್ಲಾ ಇಲಾಖೆಗಳಿಗೆ ಕಡಿತದ ಮುನ್ಸೂಚನೆ ನೀಡಿದ್ರೂ ಕೂಡ ಬಿಎಸ್‍ವೈ ಲೆಕ್ಕಚಾರ ಬೇರೆನೇ ಇದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ದಕ್ಕೆಯಾಗದಂತೆ, ಜನರ ಕೆಂಗಣ್ಣಿಗೆ ಗುರಿಯಾಗದಂತೆ ಬಿಎಸ್‍ವೈ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ರಾಷ್ಟ್ರದ ಗಮನ ಸೆಳೆದ್ದಿದ್ದ ಬಿಎಸ್‍ವೈ, ಈ ಬಾರಿ ರೈತರ ಸಾಲ ಮನ್ನಾ ಮಾಡುವಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕಳೆದ ವರ್ಷದ ಭೀಕರ ಮಳೆಯಿಂದ ಪ್ರವಾಹಕ್ಕೆ ನಲುಗಿ ಹೋಗಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಿಗೆ ವಿಶೇಷ ಪರಿಹಾರ ನೀಡುವ ಸಾಧ್ಯತೆ ಇದೆ.
ಇನ್ನು ಆರ್ಥಿಕ ಸಂಕಷ್ಟದ ನಡುವೆಯೂ ಕೆಲವೊಂದು ಹೊಸ ಯೋಜನೆಗಳನ್ನು ಘೋಷನೆ ಮಾಡುವ ಸಾಧ್ಯತೆಗಳಿವೆ. ಬರ ಪೀಡಿತ ತಾಲೂಕುಗಳಲ್ಲಿ ಕೆರೆಗಳನ್ನು ತುಂಬಿಸುವುದು, ಕೃಷಿ ಯಂತ್ರೋಪಕರಣ, ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ, ಕೈಗಾರಿಕೆಗಳಿಗೆ ಅನುಮತಿ ಸರಳೀಕರಣ, ಇಂದಿರಾ ಕ್ಯಾಂಟಿನ ಊಟ ತಿಂಡಿಯ ದರ ಹೆಚ್ಚಳ, ಯಶಸ್ವಿನಿ ಯೋಜನೆ ಮರು ಜಾರಿ ಹೀಗೆ ಕೆಲವೊಂದು ಹೊಸ ಯೋಜನೆಗಳು ಜಾರಿಗೊಳಿಸುವ ಸಾಧ್ಯತೆ ಇದೆ.
ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ
ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ. ಈ ಘಟನೆ ಹಿಂದೂ...








