ಬೆಂಗಳೂರು : ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಮಧ್ಯೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಕಿಡಿಕಾರಿದ್ದಾರೆ.
ದಿನೇಶ್ ಗುಂಡೂರಾವ್ ಟ್ವೀಟ್ ನಲ್ಲಿ, “ಬಸವರಾಜ್ ಬೊಮ್ಮಾಯಿ ಅವರೇ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಕಾರಣಕ್ಕಾಗಿಯೇ ಸಂಘ ಪರಿವಾರ ಹಾಗೂ ವಿಎಚ್‌ಪಿ ಮುಖಂಡರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆಯೇ ಹೊರತು ಸಮಾಜ ಕಟ್ಟುವ ಕೆಲಸಕಲ್ಲ. ಹೀಗಿರುವಾಗ ಅದ್ಯಾವ ಪುಣ್ಯ ಸಿದ್ದಿಗಾಗಿ ಕ್ರಿಮಿನಲ್ ಕೇಸ್ ತೆಗೆದು ಹಾಕೋ ಮಾತನಾಡಿದ್ದೀರಿ..? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, “ಯಾವುದೇ ಸಂಘಟನೆ, ಅದು ಎಸ್ ಡಿಪಿಐ ಇರಲಿ ಅಥವಾ ವಿಎಚ್‌ಪಿ ಇರಲಿ, ಸಮಾಜದ ಶಾಂತಿಗೆ ಧಕ್ಕೆ ತಂದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳೋ ಗಟ್ಟಿತನ ತೋರಿಸಿ. ಅದರ ಬದಲು ಸಂಘ ಪರಿವಾರಕ್ಕೊಂದು ಕಾನೂನು, ಬೇರೆಯವರಿಗೊಂದು ಕಾನೂನು ಎಂಬ ಎರೆಡರೆಡು ಮುಖ ತೋರಿಸಬೇಡಿ. ಕಾನೂನು ಎಲ್ಲರಿಗೂ ಒಂದೇ ಇರಲಿ” ಎಂದು ಬರೆದುಕೊಂಡಿದ್ದಾರೆ.








