ಕೋಸ್ಟಲ್ ವುಡ್ ಸಿನಿ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಬರೆದ ಗಿರಿಗಿಟ್ ಚಿತ್ರ ರಿಲೀಸ್ ಆದ ಒಂದೇ ವಾರದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿಯನ್ನು ಗಲ್ಲಾ ಪೆಟ್ಟಿಗೆಯಲ್ಲಿ ದೋಚಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ದಾಖಲೆ ಒಂದೆಡೆಯಾದ್ರೆ ಇಡೀ ವಿಶ್ವಾದ್ಯಂತ ಗಿರಿಗಿಟ್ ಚಿತ್ರ ರಿಲೀಸ್ ಆಗಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ವಿಶ್ವದಾದ್ಯಂತ 200ಕ್ಕೂ ಹೆಚ್ಚು ದಿನಗಳ ಕಾಲ ಅಂದ್ರೆ ಹತ್ತಿರ ಹತ್ತಿರ ಸುಮಾರು 300 ದಿನಗಳವರೆಗೂ ಯಶಸ್ವಿಯಾಗಿ ಪ್ರದರ್ಶನಗೊಂಡು ಸಿನಿ ರಸಿಕರಿಗೆ ಭರ್ಜರಿ ರಸದೌತಣನ್ನೇ ನೀಡಿತ್ತು. ಇದೀಗ್ ಬಿಗ್ ಸ್ಕ್ರೀನ್ ಮೇಲೆ ಸಕ್ಸಸ್ ಕಂಡಿರುವ ತುಳು ಚಿತ್ರ ಗಿರಿಗಿಟ್ ನಾಳೆ OTT ಫ್ಲಾಟ್ ಫಾರ್ಮ್ ಗೆ ಎಂಟ್ರಿ ಕೊಡಲು ಸಜ್ಜಾಗಗಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ, ಬಾಲಿವುಡ್, ಕಾಲಿವುಡ್, ಸ್ಯಾಮಡಲ್ ವುಡ್ ನ ಚಿತ್ರಗಳು ಸಹ ಡಿಜಿಟಲ್ ಮಿಡಿಯಾಗಳಲ್ಲಿ ರಿಲೀಸ್ ಆಗುತ್ತಿದ್ದು, ಅಲ್ಲಿಯೂ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿವೆ. ಇದೀಗ ಈ ಸಾಲಿಗೆ ಗಿರಿಗಿಟ್ ಚಿತ್ರ ಸಹ ಸೇರ್ಪಡಗೊಳ್ಳಲು ಸಿದ್ಧವಾಗಿದೆ. 
ಗಿರಿಗಿಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದ ನಟ ರೂಪೇಶ್ ಶೆಟ್ಟಿ ಅವರೇ , ಸಿನೆಮಾದಲ್ಲಿ ನಾಯಕನಾಗಿ ಮಿಂಚಿ ಜನಮನ್ನಣೆ ಪೆದಿದ್ದಾರೆ. ಇನ್ನೂ ರೂಪೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚೊಚ್ಚಲ ಚಿತ್ರ ಗಿರಿಗಿಟ್. ಈ ಚಿತ್ರದಲ್ಲಿ ನಾಯಕಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅವರನ್ನು ಹೊರತುಪಡಿಸಿ ತುಳುವಿನ ಹಾಸ್ಯ ನಟರಾದ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ, ಮಾಣಿಬೆಟ್ಟು ಮೊದಲಾದವರು ಕಾಣಿಸಿಕೊಂಡಿದ್ದು, ಈ ಚಿತ್ರದ ಹಾಡುಗಳಿಗೂ ಅಷ್ಟೇ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲೂ ಊರೇ ಮರ್ ಕಡ್.. ಕರ್ಪ್ಯೂ ಪಾಡಡ್.. ಹಾಡಿಗೆ ಪ್ರೇಕ್ಷಕರು ಪಿಧಾ ಆಗಿದ್ದರು. ಈ ಹಾಡಿಗೆ ಎಲ್ಲೆಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ OTT ಫ್ಲಾಟ್ ಫಾರ್ಮ್ ನಲ್ಲೂ ಈ ಚಿತ್ರ ಭಾರೀ ಯಶಸ್ವಿ ಕಾಣುವ ನಿರೀಕ್ಷೆಯಿದೆ.
ಗಿರಿಗಿಟ್ ಸಿನಿಮಾ ಕಳೆದ ವರ್ಷ ಆಗಸ್ಟ್ 23, 2019 ರಂದು ಬಿಗ್ ಸ್ಕ್ರೀನ್ ಮೇಲೆ ತೆರೆಕಂಡು ಮಂಗಳೂರು ಚಿತ್ರ ಮಂದಿರಗಳು ಸೇರಿದಂತೆ ವಿಶ್ವಾದ್ಯಂತದ ಸುಮಾರು 15 ದೇಶಗಳಲ್ಲಿ ರಿಲೀಸ್ ಆಗಿ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಮಡಿತ್ತು. ವಿಶೇಷ ಅದ ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ರೂಪೇಶ್ ಅವರು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.







