ಕೋಲ್ಕತ್ತಾ : ತನ್ನ ಹುಟ್ಟುಹಬ್ಬದಲ್ಲಿ ಕೇಕ್ ಕಟ್ ಮಾಡಿ 93 ವರ್ಷದ ಅಜ್ಜಿ ಒಬ್ಬರು ಯುವಕರನ್ನು ನಾಚಿಸುವಂತೆ ಭರ್ಜರಿ ಸ್ಟೆಪ್ಸ್ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೌರವ್ ಸಹಾ ಎಂಬ ಫೇಸ್ ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಲ್ಲದೆ ನೆಟ್ಟಿಗರು ಅಜ್ಜಿಯ ಡ್ಯಾನ್ಸ್ ಗೆ ಫುಲ್ ಫಿದಾ ಆಗಿದ್ದಾರೆ.
https://www.facebook.com/gourav.saha.754/videos/10221045055654842/
ವಿಡಿಯೋದಲ್ಲಿ ಅಜ್ಜಿ ತನ್ನ 93ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಸಾರಾ ಅಲಿಖಾನ್ ನಟನೆಯ ಸಿಂಬಾ ಚಿತ್ರದ ಪ್ರಸಿದ್ಧ ‘ಆಂಖ್ ಮಾರೆ’ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅಜ್ಜಿಗೆ ಮನೆಯವರು ಕೂಡ ಸಾಥ್ ನೀಡಿ ಅವರನ್ನು ಹುರಿದುಂಬಿಸುವುದನ್ನು ನಾವು ಕಾಣಬಹುದಾಗಿದೆ.








