ನವದೆಹಲಿ : ದೇಶದಾದ್ಯಂತ 74ನೇ ಸ್ವಾತಂತ್ರ‍್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದು, “ಮೇಡ್ ಫರ್ ವರ್ಲ್ಡ್” ಎಂದು ಕರೆ ಕೊಟ್ಟಿದ್ದಾರೆ.
ಮೋದಿ ಭಾಷಣದಲ್ಲಿ, “ಆತ್ಮ ನಿರ್ಭರ ಭಾರತ ಒಂದು ಕನಸು ಸಂಕಲ್ಪವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, 130 ಕೋಟಿ ಜನರಿಗೆ ಆತ್ಮ ನಿರ್ಭರ ಭಾರತ ಮಂತ್ರವಾಗಿದೆ. ಭಾರತವನ್ನು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಬೇಕಿದೆ, ಈ ಕನಸನ್ನು ಭಾರತ ಚರಿತ್ರೆಯನ್ನಾಗಿ ಮಾಡುವ ನಂಬಿಕೆ, ದೇಶದ ಪ್ರತಿಭೆಯ ಬಗ್ಗೆ ಗರ್ವವಿದೆ. ಯುವಕರ ಮೇಲೆ ನಂಬಿಕೆ ಇದೆ ಎಂದು ಮೋದಿ ಹೇಳಿದ್ದಾರೆ.
ಭಾರತ ದೇಶ ಸಂಸ್ಕಾರದಿಂದ ತುಂಬಿದೆ. ವಿಶ್ವ ಒಂದು ಪರಿವಾರ, ಆರ್ಥಿಕ ವಿಕಾಸವಾಗಲಿ, ಮಾನವ ಹಾಗೂ ಮಾನವೀಯತೆಗೆ ವಿಶೇಷ ಸ್ಥಾನವಿರಬೇಕು. ವಿಶ್ವ ಕಲ್ಯಾಣದಲ್ಲಿ ಭಾರತದ ಕರ್ತವ್ಯವಿದೆ ಎಂದ ಮೋದಿ, ಭಾರತ ಸಶಕ್ತವಾಗಬೇಕಿದೆ, ಆತ್ಮ ನಿರ್ಭರವಾಗಬೇಕಿದೆ ಎಂದು ಕರೆಕೊಟ್ಟರು.
ನಮಗೆ ನಮ್ಮ ಖುದ್ದಾದ ಸಾಮರ್ಥ್ಯವಿದ್ದರೆ ಇಡೀ ವಿಶ್ವದ ಅಭಿವೃದ್ಧಿಯಾಗಲಿದೆ ಎಂದು ಮೇಡ್ ಫರ್ ವರ್ಲ್ಡ್ ಎಂದ ಮೋದಿ, ಮಾನವ ಸಂಪದದಲ್ಲಿ ಮೌಲ್ಯವೃದ್ಧಿ ಮಾಡೋಣ.. ಕಚ್ಚಾ ವಸ್ತುಗಳನ್ನು ವಿದೇಶಕ್ಕೆ ಕಳುಹಿಸುವುದು, ರೆಡಿ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಎಷ್ಟು ದಿನ ನಡೆಯುತ್ತದೆ. ಆತ್ಮ ನಿರ್ಭರವಾಗಲೇಬೇಕು. ಕೃಷಿ ಕ್ಷೇತ್ರದಲ್ಲಿ ಆತ್ಮ ನಿರ್ಭರ ಮಾಡಿದ್ದಾರೆ, ಬೇರೆ ದೇಶಗಳಿಗೂ ಊಟ ನೀಡಲು ನಮ್ಮ ರೈತರು ತಯಾರಿದ್ದಾರೆ. ಕೃಷಿ ಜಗತ್ತನ್ನು ಮುನ್ನುಗ್ಗಿಸುವ ಅವಶ್ಯಕತೆ ಇದೆ. ಕೃಷಿ ಕ್ಷೇತ್ರವನ್ನು ಕಾನೂನಿನಿಂದ ಮುಕ್ತಗೊಳಿಸಿದ್ದೇವೆ ಎಂದು ತಿಳಿಸಿದರು








