ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇತ್ತ ಕೊರೊನಾ ಪರೀಕ್ಷೆ ಮಾಡಿಸಲು ಶ್ರೀಮಂತರಿಗೆ ಏನೂ ಕಷ್ಟವಾಗದೇ ಹೋದರು ಬಡವರಿಗೆ ದುಡ್ಡು ಹೊಂಚುವುದು ಕಷ್ಟ. ಹೀಗಾಗಿ ರಾಜ್ಯ ಸರ್ಕಾರ ಕೊರೋನಾ ಪರೀಕ್ಷಾ ದರವನ್ನು ಮತ್ತಷ್ಟು ಕಡಿತಗೊಳಿಸಿದೆ.
ವಿಧಾನಸೌಧದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಡಿಸಿಎಂ ಅಶ್ವತ್ಥ್ ನಾರಾಯಣ ಅವರು, ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಪ್ರಯೋಗಾಲಗಳಿಗೆ ರೆಫರ್ ಮಾಡುವ ಸೋಂಕಿತರ ಗಂಟಲ ದ್ರವ ಪರೀಕ್ಷೆ ದರವನ್ನು 2 ಸಾವಿರದಿಂದ ರೂಪಾಯಿಗಳಿಂದ 1,500ಕ್ಕೆ ಇಳಿಕೆ ಮಾಡಲಾಗಿದೆ. ಅಂತೆಯೇ ನೇರವಾಗಿ ಖಾಸಗಿ ಪ್ರಯೋಗಾಲಯಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುಲು 3 ಸಾವಿರ ರೂಪಾಯಿಗಳನ್ನು ವಿಧಿಸಲಾಗುತ್ತಿತ್ತು. ಈ ದರವನ್ನು 500ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೆರುಗು ಸಿಗಲಿದೆ. ಅರಮನೆ ನಗರಿಯ ಅಂಗಳದಲ್ಲಿ ಅಕ್ಟೋಬರ್ 18 ಮತ್ತು...








