ಆಂಧ್ರ ಪ್ರದೇಶ : ಸಾಮಾನ್ಯವಾಗಿ ದೇವಾಲಯದ ಮೇಲೆ ದೇವತೆಗಳ ವಿಗ್ರಹಗಳಿರುತ್ತವೆ. ಆದ್ರೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ದೇವಾಲಯದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ವಿಗ್ರಹಗಳಿವೆ. ಇಲ್ಲಿನ ಜನರು ಅವುಗಳಿಗೆ ಪ್ರತಿ ನಿತ್ಯ ಪೂಜೆ ಸಲ್ಲಿಸುತ್ತಾರೆ.
ಹೌದು..! ಆಂಧ್ರಪ್ರದೆಶದ ಶ್ರೀಕಾಕುಲಂ ಜಿಲ್ಲೆಯ ಪಾಲಕೊಂಡ ವಲಯದಲ್ಲಿ ವೇಲಗವಾಡ ಎಂಬ ಗ್ರಾಮವಿದೆ. ಇಲ್ಲಿ ದೇಶಭಕ್ತಿ ವ್ಯಕ್ತಪಡಿಸಲು ದೇವಾಲಯದ ಮೇಲೆ ದೇಶಭಕ್ತರ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರ ವಿಗ್ರಹಗಳನ್ನು ನಿರ್ಮಿಸಿ, ಪೂಜೆ ಸಲ್ಲಿಸುತ್ತಿದ್ದಾರೆ.
ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಪ್ರತಿಮೆಗಳಿವೆ. ದೇವರೊಂದಿಗೆ ಸ್ವಾತಂತ್ರ‍್ಯ ಹೋರಾಟಗಾರರನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ಮೂಲಕ ಗ್ರಾಮಸ್ಥರು ಪ್ರತಿದಿನ ದೇಶಭಕ್ತರನ್ನು ಸ್ಮರಿಸುವ ಮೂಲಕ ದೇಶಭಕ್ತಿ ಮೆರೆಯುತ್ತಿದ್ದಾರೆ.







