ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಅಪರಾಧಿಗಳಿಗೆ ಕೊನೆಗೂ ಗಲ್ಲಿಗೇರಲು ಸಮಯ ಬಂದಂತೆ ತೋರುತ್ತಿದೆ.ದೆಹಲಿಯ ಪಟಿಯಾಲ ಕೋರ್ಟ್ ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಇಂದು ಹೊಸ ಡೆತ್ ವಾರಂಟ್ ಜಾರಿಗೊಳಿಸಿದೆ. ಇದೇ ಮಾರ್ಚ್ 20ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಆರೋಪಿಗಳನ್ನು ನೇಣಿಗೇರಿಸಲು ಕೋರ್ಟ್, ಹೊಸ ಡೆತ್ ವಾರೆಂಟ್ ಗೆ ಆದೇಶ ನೀಡಿದೆ.
ದಿನಕ್ಕೊಂದು ಕಾರಣ ನೀಡುತ್ತಾ ಕಾನೂನಿನ ಮಾರ್ಗಗಳಿಂದ ತಪ್ಪಿಸಿಕೊಳ್ಳಲು ನೋಡಿದ ನಿರ್ಭಯಾ ಅತ್ಯಾಚಾರಿಗಳಿಗೆ ಈಗಾಗಲೇ ಮೂರು ಬಾರಿ ಡೆತ್ ವಾರೆಂಟ್ ನೀಡಲಾಗಿದೆ. ಅಪರಾಧಿಗಳಿಗೆ ಇರುವ ಎಲ್ಲಾ ಕಾನೂನು ಮಾರ್ಗಗಳನ್ನು ಅವರು ಬಳಸಿಕೊಂಡಿದ್ದು, ಇನ್ನು ಅವರಿಗೆ ಯಾವುದೇ ಅವಕಾಶವಿಲ್ಲದಂತಾಗಿದ್ದು, ಇದೀಗ ನಾಲ್ಕನೇ ಡೆತ್ ವಾರೆಂಟ್ ಜಾರಿಯಾಗಿದೆ.
ಆದರೂ ಕಾನೂನಿನ ಅಡಿಯಲ್ಲಿ ಯಾವ ಹೊಸ ನಾಟಕ ನಿರ್ಭಯಾ ರೇಪಿಸ್ಟ್ ಗಳ ಬತ್ತಳಿಕೆಯಲ್ಲಿದೆ ಎಂಬ ಕುತೂಹಲ ಜನರಲ್ಲಿದೆ.ಪಟಿಯಾಲ ಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಾಗಿದ್ದು, ಕೋರ್ಟ್ ಇವರ ನಾಟಕಕ್ಕೆ ಇತಿಶ್ರೀ ಹಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ
ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ
ರಾಜ್ಯ ರಾಜಕಾರಣದಲ್ಲಿ ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರದ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಠಿಣ...








