ದೊಂಬಿವಾಲಿ ಫಾಸ್ಟ್, ಮುಂಬೈ ಮೇರಿ ಜಾನ್, ರಾಕಿ ಹ್ಯಾಂಡ್ ಸಮ್ ಸೇರಿದಂತೆ ಹಲವು ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಬಾಲಿವುಡ್ ನ ಖ್ಯಾತ ನಿರ್ದೇಶಕ ನಿಷಿಕಾಂತ್ ಕಾಮತ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ನಿಷಿಕಾಂತ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.ಆದ್ರೆ ಇಂದು ಬೆಳಗ್ಗೆ 10.30 ಸುಮಾರಿಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನಿಷಿಕಾಂತ್ ಅವರು 2005ರಲ್ಲಿ ಮರಾಠಿಯಲ್ಲಿ ತೆರೆಕಂಡಿದ್ದ ದೊಂಬಿವಾಲಿ ಫಾಸ್ಟ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಪದಾರ್ಪಣೆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿಕೊಂಡಿದ್ದರು. 2008ರಲ್ಲಿ ಮುಂಬೈ ಮೇರಿ ಜಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಕಾಲಿಟ್ಟಿದ್ದರು. ನಿರ್ದೇಶನದ ಜತೆಗೆ ಡ್ಯಾಡಿ, ರಾಕಿ ಹ್ಯಾಂಡ್ ಸಮ್, ಜೂಲಿ 2, ಭವೇಶ್ ಜೋಶಿ ಸಿನಿಮಾಗಳಲ್ಲಿ ನಟಿಸಿದ್ದರು.









