ಉಡುಪಿ : ಬೈಂದೂರು ತಾಲೂಕಿನ ನಾಡದೋಣಿ ದುರಂತ ಹಿನ್ನೆಲೆ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ನಾಲ್ವರು ಮೀನುಗಾರರಾದ ಬಿ.ನಾಗರಾಜ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರ ಮೃತದೇಹಗಳು ಸಮುದ್ರ ಕಿನಾರೆಯಲ್ಲಿ ಸಿಕ್ಕಿದೆ.
ಭಾನುವಾರ ಮಧ್ಯಾಹ್ನ ನಾಡದೋಣಿ ಬಂಡೆಗೆ ಡಿಕ್ಕಿಯಾಗಿ ಮೀನುಗಾರರು ಕಣ್ಮರೆಯಾಗಿದ್ದರು. ಸೋಮವಾರ ಬೆಳಗ್ಗೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಳಿಯ ನಾಗೂರಿನಲ್ಲಿ ನಾಗ ಖಾರ್ವಿ ಮೃತದೇಹ ಪತ್ತೆಯಾಗಿತ್ತು. ರಾತ್ರಿ ಆದ್ರಗೋಳಿಯಲ್ಲಿ ಲಕ್ಷ್ಮಣ ಖಾರ್ವಿ ಮತ್ತು ಶೇಖರ ಖಾರ್ವಿ ಅವರ ಮೃತದೇಹಗಳು ಕಂಡುಬಂದಿವೆ. ನಂತರ ಮಂಜುನಾಥ ಖಾರ್ವಿ ಮೃತದೇಹ ಕೂಡ ಗಂಗೆಬೈಲು ಎಂಬಲ್ಲಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.









