ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 2020–21ನೇ ಸಾಲಿನ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದು, ‘ಸರ್ಕಾರದ ಬಳಿ ಹಣ ಇಲ್ಲ. ಇದೊಂದು ದರಿದ್ರ ಸರ್ಕಾರ ಎಂದು ನಾನು ಟೀಕಿಸಿದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಉತ್ತರಿಸುತ್ತೇನೆ’ ಎಂದು ಹೇಳುತ್ತಿದ್ದರು.ಈಗ ಸರ್ಕಾರದ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಬಜೆಟ್ ನಲ್ಲಿ ಉತ್ತರ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ಗಾತ್ರ ಶೇ10ರಷ್ಟು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿತ್ತು. ನನ್ನ ಅವಧಿಯ ಮೊದಲ ಬಜೆಟ್ ಗಾತ್ರ ₹1.02 ಲಕ್ಷ ಕೋಟಿ ಆಗಿದ್ದರೆ, ಕೊನೆಯ ಬಜೆಟ್ ₹2.18 ಲಕ್ಷ ಕೋಟಿಗೆ ಹೆಚ್ಚಳವಾಗಿತ್ತು. ಹಣದುಬ್ಬರವಿರುವಾಗ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಕನಿಷ್ಠ ಶೇ 5ರಿಂದ ಶೇ 6ರಷ್ಟಾದರೂ ಹೆಚ್ಚಳವಾಗಬೇಕು. ಆದರೆ 2019–20ನೇ ಸಾಲಿಗೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರದ ಕೇವಲ ಶೇ 1.6ರಷ್ಟು ಹೆಚ್ಚಳವಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.
ಇದೊಂದು ರೈತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಹಿಂದುಳಿದವರ ವಿರೋಧಿ ಬಜೆಟ್. ಅಭಿವೃದ್ಧಿ ಮುನ್ನೋಟವೇ ಇಲ್ಲದ ಬಜೆಟ್ ಇದು. ಆರು ವಲಯಗಳನ್ನಾಗಿ ವಿಂಗಡಿಸಿ ಬಜೆಟ್ ಮಂಡಿಸಿದ್ದಷ್ಟೇ ಬದಲಾವಣೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಪಂಚಮಸಾಲಿ ಪ್ರತಿಭಟನೆ ಗಾಯದ ಮೇಲೆ ‘ಉಪ್ಪು’ ಸವರಿದ CM & ಕಿಚ್ಚು ಹೊತ್ತಿಸಿದ ‘ಪರಂ’..!
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲಿನ ಲಾಠಿಚಾರ್ಜ್ ಸಂಬಂಧ ಸಮುದಾಯದ ಹೋರಾಟದ ಕಿಚ್ಚು ಜ್ವಾಲಾಮುಖಿಯಾಗಿ ಸರ್ಕಾರದ ಅಡಿಪಾಯಕ್ಕೆ ಬಿಸಿಮುಟ್ಟಿಸತೊಡಗಿದೆ ಈ ಬಗ್ಗೆ ಇನ್...