ಇತ್ತೀಚೆಗಷ್ಟೇ ಇಟಲಿ ಪ್ರವಾಸವನ್ನು ಮುಗಿಸಿ ವಾಪಾಸಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಶಂಕಿತ ಕೊರೋನಾ ಪರೀಕ್ಷೆ ಮಾಡಿಸಬೇಕು ಎಂದು ಸಂಸದರೊಬ್ಬರು ಗುರುವಾರ ಲೋಕಸಭೆಯಲ್ಲಿ ಆಗ್ರಹಿಸಿದ ಘಟನೆ ನಡೆಯಿತು.
ಲೋಕಸಭೆಯಲ್ಲಿ ಜಗತ್ತಿನಾದ್ಯಂತ ಭಯಭೀತ ವಾತಾವರಣ ಹುಟ್ಟು ಮಾಡಿರುವ ಕೊರೊನಾ ವೈರಸ್ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಕ್ಷೇತರ ಸಂಸದ ಹನುಮಾನ್ ಬೇನಿವಾಲ ಅವರು ಮೊದಲು ಈ ವಿಚಾರವನ್ನು ಪ್ರಸ್ತಾಪಿಸಿದರು.
ರಾಹುಲ್ ಮತ್ತು ಸೋನಿಯಾ ಗಾಂಧಿ ಅವರ ಇತ್ತೀಚೆಗಿನ ಇಟಲಿ ಪ್ರವಾಸವನ್ನು ಉಲ್ಲೇಖಿಸಿದ ಪಕ್ಷೇತರ ಸಂಸದ ಬೇನಿವಾಲಾ ಅವರಿಬ್ಬರಿಗೂ ಶಂಕಿತ ಕೊರೋನಾ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು, ಹನುಮಾನ್ ಬೇನಿವಾಲಾ ಅವರ ಕ್ಷಮೆ ಅಥವಾ ಅಮಾನತಿಗೆ ಆಗ್ರಹಿಸಿದರು. ಕೂಡಲೇ ಲೋಕಸಭಾಧ್ಯಕ್ಷರು ವಿಚಾರವನ್ನು ಕಡತದಿಂದ ತೆಗೆದು ಹಾಕಲು ಸೂಚಿಸಿದರು ಮತ್ತು ಈ ವಿಚಾರವನ್ನು ಅಲ್ಲಿಗೇ ಮುಗಿಸಲು ಪ್ರಯತ್ನಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಮಾತ್ರ ಬೇನಿವಾಲಾ ಅವರ ಕ್ಷಮೆಗೆ ಪಟ್ಟುಹಿಡಿದರು.
ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ
ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಠಿಣ...








