ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ 65 ದಿನಗಳ ಬಳಿಕ ಈ ಕೇಸ್ ಸಿಬಿಐಗೆ ವರ್ಗಾಯಿಸಬೇಕೆಂದು ಭಾರತದ ಸರ್ವೋಚ್ಛ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ. ಇದರ ಜೊತೆಗೆ ಪಟ್ನಾದಿಂದ ಮುಂಬೈಗೆ FIR ವರ್ಗಾಯಿಸುವಂತೆ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅಭಿಮಾನಿಗಳು, ಕುಟುಂಬಂಸ್ಥರ ಇಷ್ಟುದಿಗಳ ಹೋರಾಟಕ್ಕೆ ಜಯ ಸಿಕ್ಕಿದೆ ಈ ವಿಚಾರವಾಗಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. 
ನಟಿ ಶಿಲ್ಪ ಶೆಟ್ಟಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ಸುಪ್ರೀಂ ಕೋರ್ಟ್ನ ತೀರ್ಪು ಶ್ಲಾಘನೀಯ. ಶೀಘ್ರದಲ್ಲಿಯೇ ಸತ್ಯ ಹೊರಬರಲಿದೆ ಎಂದು ಭಾವಿಸುತ್ತೇನೆ. ಸತ್ಯಕ್ಕಾಗಿ ಸುಶಾಂತ್ ಅವರ ಕುಟುಂಬ, ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮೂಲಕ ಸುಶಾಂತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸತ್ಯ ಮೇಲುಗೈ ಸಾಧಿಸಲಿ. ” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೂ ನಟಿ ಪರಿಣೀತಿ ಚೋಪ್ರಾ ಅವರು ಸಹ ಈ ಕುರಿತು ಟ್ವೀಟ್ ಮಾಡಿದ್ದು “ಇದು ಸಕರಾತ್ಮಕವಾದ ಹೆಜ್ಜೆಯಾಗಿದ್ದು, ಎಲ್ಲರೂ ಈ ಕ್ಷಣವನ್ನು ಗೌರವಿಸೋಣ. ಸಿಬಿಐ ತಮ್ಮ ಕೆಲಸವನ್ನು ಈಗ ಮಾಡಲಿ. ದಯವಿಟ್ಟು ತಮ್ಮದೆ ಆದ ತೀರ್ಮಾನಕ್ಕೆ ಬರುವುದು ಮತ್ತು ಊಹಾಪೂಹಗಳನ್ನು ಹಬ್ಬಿಸುವುದನ್ನು ನಿಲ್ಲಿಸೋಣ” ಎಂದು ತಿಳಿಸಿದ್ದಾರೆ.









