ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣಾರ್ಭಟಕ್ಕೆ ಜನ ತತ್ತರಿಸಿಹೋಗಿದ್ದಾರೆ. ಬಿಟ್ಟು ಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ದೆಹಲಿ, ಗುರುಗ್ರಾಮ, ನೋಯ್ಡಾ ದಲ್ಲಂತೂ ಮಳೆ ಆರರ್ಭಟಕ್ಕೆ ರಸ್ತೆಗಳೆಲ್ಲಾ ಜಲಾವೃತಗೊಂಡು ನದಿಗಳ ಸ್ವರೂಪ ಪಡೆದುಕೊಂಡಿವೆ. ನಿರಂತರ ಮಳೆಗೆ ಒಳ ಚರಂಡಿ ನೀರೆಲ್ಲಾ ರಸ್ತೆಗಳ ಮೇಲೆ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ. 
ಇತ್ತ ಬರಫ್ ಕನ್ನಾ, ಮಯೂರ್ ವಿಹಾರ್ ಫೇಸ್ 3, ಗೌತಮ್ ಬುದ್ಧ ನಗರ, ಸೇರಿ ಬಹುತೇಕ ನಗರಗಳು ನೀರಿನಲ್ಲಿ ಮುಳುಗಿ ನಡುಗಡ್ಡೆಗಳಾಗಿ ಹೋಗಿವೆ. ಇದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳೆದಂತಾಗಿದೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ. ಯಾಕೆಂದರೆ ಮುಂದಿನ 24 ಗಂಟೆ ಕಾಲ ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದ್ದು, ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
https://twitter.com/i/status/1295982309154238465









