ಕೊರೊನಾ ಸಂಕಷ್ಟದ ನಡುವೆಯೂ ನಿಗದಿತ ಸಮಯಕ್ಕೆ JEE, NEET ಪ್ರವೇಶ ಪರೀಕ್ಷೆಗಳನ್ನ ನಡೆಸಲು ಈಗಾಗಲೇ ಸಿದ್ಧತೆಗಳು ನಡೆದಿವೆ. ಆದರೆ ಇದಕ್ಕೆ ಹಲವು ರಾಜ್ಯಗಳ ವಿದ್ಯಾರ್ಥಿಗಳ ವಿರೋಧವೂ ಇದೆ. ಇದೀಗ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಪರಿಸ್ಥಿತಿ ಸುಧಾರಿಸುವವರೆಗೆ JEE, NEET ಪ್ರವೇಶ ಪರೀಕ್ಷೆಗಳನ್ನ ಮುಂದುಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 
ಇನ್ನೂ ಸುಪ್ರೀಂ ಕೋರ್ಟ್ ವೇಳಾಪಟ್ಟಿಯ ಪ್ರಕಾರ JEE ಮತ್ತು NEET ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ನಡೆಸಿ ಎಂದು ಸೂಚನೆ ನಿಡಿದೆ. ಅದ್ರಂತೆ, ಪರೀಕ್ಷೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಪರೀಕ್ಷೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಆಗುವವರೆಗೂ ಪರೀಕ್ಷೆಗಳನ್ನ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರೆ.









