ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮರ್ ಅವರು ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ, ಡಿ ಕೆ ಶಿವಕುಮಾರ್ ಅವರ ಫೋನ್ ಟ್ಯಾಪ್ ಮಾಡಿ ದೇಶದಲ್ಲಿ ಏನು ಉದ್ಧಾರ ಮಾಡಬೇಕು ನನಗೆ ಅರ್ಥ ಅಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಏನು ಕಡಿದು ಗುಡ್ಡೆ ಹಾಕಿದ್ದಾರೆ ಎಂದು ಫೋನ್ ಟ್ಯಾಪ್ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಡಿ.ಕೆ.ಶಿವಕುಮಾರ್ ಅವರು ಕೇವಲ ಪ್ರಚಾರ ತಂತ್ರ ಮಾಡುತ್ತಿದ್ದಾರೆ. ಅದರ ಮೂಲಕ ದೊಡ್ಡವರಾಗಲು ನೋಡಿದ್ದಾರೆ. ಅವರ ಫೋನ್ ಟ್ಯಾಪ್ ಅಗುತ್ತಿಲ್ಲ. ಡಿಕೆಶಿಯದ್ದು ಅರ್ಥವಿಲ್ಲದ ಹೇಳಿಕೆ ಹಾಗೂ ಆರೋಪ ಎಂದು ಕಿಡಿಕಾರಿದ್ದಾರೆ.![]()
ಇದೇ ವೇಳೆ ಎಐಸಿಸಿ ಅಧ್ಯಕ್ಷ ನೇಮಕ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಪಕ್ಷದ ನಾಯಕ ಸ್ಥಾನ ಒಡೆದ ಕನ್ನಡಿಯಂತೆ ಅಗಿದೆ. ಒಮ್ಮೆ ಒಡೆದ ಕನ್ನಡಿ ಮತ್ತೆ ಸೇರುವುದಕ್ಕೆ ಸಾಧ್ಯವಿಲ್ಲ. ಅದು ಚೂರು ಚೂರಾಗಿ ಹೋಗಿದೆ. ಪಕ್ಷದ ನಾಯಕರ ವಿರುದ್ಧ ಹಿರಿಯ ನಾಯಕರುಗಳೇ ಪತ್ರ ಬರೆಯುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಇಲ್ಲ, ಸಿದ್ದಾಂತ ಹಾಗೂ ಸಂಘಟನೆಯ ಕಾರ್ಯಕರ್ತರ ಗುಂಪು ಇಲ್ಲ ಎಂದರು.









