ಕೊರೊನಾ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ಇದೀಗ ಜನಿಸಿದ ಮೂರು ಗಂಟೆಯಲ್ಲೇ ಹಸುಗೂಸಿಗ ಕೊರೊನಾ ಸೋಂಕು ತಗುಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇವರಿಗೆ ಜನಿಸಿದ ನವಜಾತ ಶಿಶುವಿಗೂ ಕೊರೊನಾ ಸೋಂಕು ತಗುಲಿದೆ. ಇನ್ನೂ ಸರಿಯಾಗಿ ಕಣ್ಣು ಬಿಡುವ ಮುನ್ನವೇ ಜನಿಸಿದ 3 ಗಂಟೆಯಲ್ಲೇ ಪುಟ್ಟ ಕಂದಮ್ಮ ಡೆಡ್ಲಿ ಕೊರೊನಾಗೆ ಪ್ರಾಣ ಬಿಟ್ಟಿದೆ.
![]()
ಇನ್ನೂ ದುರಂತ ಅಂದರೆ ಈ ಪುಟ್ಟ ಕಂದನ ಮುಖವನ್ನು ಪೋಷಕರಾಗಲಿ ಸಂಬಂಧಿಕರಾಗಲಿ ಯಾರಿಗೂ ನೋಡುವುದಕ್ಕೂ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಾಗ್ಯ ಸಿಕ್ಕಿಲ್ಲ. ಸಂಬಂಧಿ ಪರವಾಗಿ ಶಾಸಕ ಜಮೀರ್ ಅವರ ತಂಡ ಹಿಂದೂ ಸಂಪ್ರದಾಯದಂತೆ ಈ ಮಗುವಿನ ಅಂತ್ಯಕ್ರಿಯೆ ನೆರವೇರಿಸಿದರು.









