ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಟಿ-20 ಚಾಂಪಿಯನ್ ಪಟ್ಟಕ್ಕೆ ಮದುವಣಗಿತ್ತಿಯಂತೆ ಎಂಸಿಜಿ ಕ್ರೀಡಾಂಗಣ ಶೃಂಗಾರಗೊಂಡಿದೆ. ಈ ರೋಮಾಂಚಕ ಪಂದ್ಯವನ್ನು ನೋಡಲು ವಿಶ್ವದಾಖಲೆಯ ಪ್ರೇಕ್ಷಕರು ಈಗಾಗಲೇ ಕೌತುಕದಿಂದ ಕಾಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧ ಮಳೆಯಿಂದಾಗಿ ಒತ್ತಡದಲ್ಲಿ ಆಡಿ ಸೆಮಿಫೈನಲ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡ ವಿಶ್ವಾಸದಿಂದ ಬೀಗುತ್ತಿದ್ದರೆ, ಸೆಮಿಫೈನಲ್ ಆಡದೇ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಗುರುವಾರ ಸಿಡ್ನಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಮೊದಲ ಬಾರಿಗೆ ಫೈನಲ್ ಗೆ ಪ್ರವೇಶಿಸಿರುವ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಭಾನುವಾರ ಕಿಕ್ಕಿರಿದು ತುಂಬಿರುವ ಮೆಲ್ಬರ್ನ್ ನ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಅನ್ನು ಎತ್ತಿ ಹಿಡಿಯಲು ಉತ್ಸುಕರಾಗಿದ್ದು, ರೋಚಕ ಸೆಣಸಾಟವನ್ನು ಎದುರು ನೋಡಬಹುದಾಗಿದೆ
ಪಾಕ್ಗೆ ಅಮೆರಿಕಾ ದೊಡ್ಡಣ್ಣ.. ಚೀನಾ ಚಿಕ್ಕಣ್ಣ ಆಗಿರಬಹುದು.. ಆದ್ರೆ ಐಸಿಸಿಗೆ ಭಾರತದ ಬಿಸಿಸಿಐ ದೊಡ್ಡಣ್ಣನೂ ಹೌದು..ಒಡೆಯನೂ ಹೌದು..!
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈಗ ಬ್ರದರ್ಸ್ ಅಂತೆ. ಹೋ.. ಹೋ..ಎಷ್ಟೊಂದು ಪ್ರೀತಿ, ಎಷ್ಟೊಂದು ಅಗಾಧವಾದ ಸ್ನೇಹ.. ಅಬ್ಬಾಬ್ಬಾ...ಯಾರನ್ನು ನಂಬಬೇಕು..? ಬೆನ್ನಿಗೆ ಚೂರಿ ಹಾಕುವುದು ಅಂದ್ರೆ ಇದೆ ಅಲ್ವಾ.....








