ನವದೆಹಲಿ : ಕೇಂದ್ರದ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೋವಿಡ್ ಸೋಂಕು ನಿಯಂತ್ರಿಸಲು ಲಸಿಕೆ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
![]()
ಈ ಬಗ್ಗೆ ಟ್ವಿಟ್ ಮಾಡಿರುವ ರಾಗಾ ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿತಗೊಳಿಸಲು ಈ ವೇಳೆಗಾಗಲೇ ಲಸಿಕೆ ಲಭ್ಯವಿರಬೇಕಿತ್ತು. ಆದರೆ ಅದರ ಯಾವುದೇ ಲಕ್ಷಣಗಳು ಇನ್ನೂ ಇಲ್ಲ. ಈ ಸಂಬಂಧ ಭಾರತ ಸರ್ಕಾರದ ಪೂರ್ವಸಿದ್ಧತೆ ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.









