ಶೋಪಿಯಾನ್ ಎನ್ ಕೌಂಟರ್ – 4 ಮಂದಿ ಉಗ್ರರ ಹತ್ಯೆ, ಒಬ್ಬ ಉಗ್ರನ ಶರಣಾಗತಿ
ಶೋಪಿಯಾನ್, ಅಗಸ್ಟ್29: ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ (ಆಗಸ್ಟ್ 28, 2020) ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 4 ಜನ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ಶರಣಾಗಿದ್ದಾನೆ.
![]()
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕಿಲೂರಾ ಗ್ರಾಮದಲ್ಲಿ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಕನಿಷ್ಠ 4 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ಶರಣಾಗಿದ್ದಾನೆ. ಎರಡು ಎಕೆ -47 ಮತ್ತು 3 ಪಿಸ್ತೂಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಜಂಟಿ ಭದ್ರತಾ ಕಾರ್ಯಾಚರಣೆ ನಡೆಯುತ್ತಿದೆ.
ಭಯೋತ್ಪಾದಕ ಶಕೂರ್ ಪರೇ ಅಲ್ ಬದ್ರ್ ಜಿಲ್ಲಾ ಕಮಾಂಡರ್ ಮತ್ತು ಖನ್ಮೋ ಅವರ ಪಂಚ್ ಅನ್ನು ಅಪಹರಿಸಿ ಕೊಂದ ಇನ್ನೊಬ್ಬ ಭಯೋತ್ಪಾದಕ ಸುಹೇಲ್ ಭಟ್ ಇಂದಿನ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಐಜಿ ಪೊಲೀಸ್ ಕಾಶ್ಮೀರ ವಿಜಯ್ ಕುಮಾರ್ ಹೇಳಿದ್ದಾರೆ.

ಭಯೋತ್ಪಾದಕರು ಅಡಗಿರುವ ನಿರ್ದಿಷ್ಟ ಮಾಹಿತಿಯ ಮೇರೆಗೆ ಪೊಲೀಸ್ ಮತ್ತು ಸೇನೆಯ ಜಂಟಿ ತಂಡವು ಕಿಲೂರಾ ಪ್ರದೇಶವನ್ನು ಸುತ್ತುವರಿದ ನಂತರ ಪ್ರಾರಂಭವಾದ ಎನ್ಕೌಂಟರ್ ಸಮಯದಲ್ಲಿ ಓರ್ವ ಉಗ್ರನು ಶರಣಾಗಿದ್ದಾನೆ.
ಭದ್ರತಾ ಪಡೆಗಳು ಅಡಗುತಾಣವನ್ನು ಸುತ್ತುವರಿಯುತ್ತಿದ್ದಂತೆ, ಉಗ್ರರು ಭಾರಿ ಗುಂಡಿನ ದಾಳಿಯನ್ನು ಪ್ರಾರಂಭಿಸಿದರು. ಘಟನೆ ನಡೆದ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಾಪತ್ತೆಯಾದ ಪಂಚ್ ನಿಸಾರ್ ಅಹ್ಮದ್ ಶವವನ್ನು ಶೋಪಿಯಾನ್‌ನಲ್ಲಿರುವ ಹಣ್ಣಿನ ತೋಟದಿಂದ ವಶಪಡಿಸಿಕೊಳ್ಳಲಾಗಿದೆ. ಸ್ಥಳೀಯರು ಈ ಶವವನ್ನು ಗುರುತಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ನಿಸಾರ್ ಅಹ್ಮದ್ ಆಗಸ್ಟ್ 19 ರಂದು ಶ್ರೀನಗರದಿಂದ ಶೋಪಿಯಾನ್ ಗೆ ತೆರಳಿದ್ದರು ಮತ್ತು ಅಂದಿನಿಂದ ಕಾಣೆಯಾಗಿದ್ದರು ಎಂದು ವರದಿಯಾಗಿದೆ. ಭಯೋತ್ಪಾದಕರು ಬಿಡುಗಡೆ ಮಾಡಿದ ಆಡಿಯೋ ಟೇಪ್ ನಲ್ಲಿ ಪಂಚ್ ನನ್ನು ಅಪಹರಿಸಿ ಕೊಲ್ಲಲಾಗಿದೆ ಎಂದು ಹೇಳಿಕೊಂಡಿತ್ತು.








