ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ಜಾಲದ ಬಗ್ಗೆ ಒಂದೊಂದೇ ಸ್ಫೋಟಕ ರಹಸ್ಯಗಳು ಹೊರ ಬರುತ್ತಿವೆ. ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್‍ವುಡ್ ನಟ-ನಟಿಯರು, ನಿರ್ಮಾಪಕ, ನಿರ್ದೇಶಕರು ಇರುವ ಬಗ್ಗೆ ಇಂದ್ರಜಿತ್ ಲಂಕೇಶ್ ಬಹಿರಂಗಪಡಿಸಿದ ಬೆನ್ನಲ್ಲೇ, ನವರಸ ನಾಯಕ ಜಗ್ಗೇಶ್ ಸರಣಿ ಟ್ವೀಟ್‍ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಆಕ್ರೋಶದ ಬೆನ್ನಲ್ಲೇ ಅವರೊಂದು ಪಾರ್ಟಿಯ ಬಗ್ಗೆ ಹೇಳಿರುವ ಸಂಗತಿ ಡ್ರಗ್ಸ್ ಪಾರ್ಟಿಯ ಮುಖವನ್ನು ಅನಾವರಣಗೊಳಿಸಿದೆ.
ಬಲವಂತಕ್ಕೆ 2017ರಲ್ಲಿ ಒಬ್ಬ ರಾಜಕಾರಣಿ ಆಯೋಜಿಸಿದ್ದ ಪಾರ್ಟಿಗೆ ಹೋಗಿದ್ದೆ. ಅರ್ಧ ಗಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ, ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು! ಅದನ್ನು ಕಂಡು ನಾನು ನನ್ನ ಆತ್ಮೀಯ ಯುವನಟ ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೇ ಕಡೆ, ಇಂದಿಗೂ ನನಗೆ ಯಾರು ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು ಎಂದು ಟ್ವಿಟರ್‍ನಲ್ಲಿ ಬಹಿರಂಗಪಡಿಸುವ ಮೂಲಕ ಮಾಯಾಜಾಲದ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಚಿತ್ರರಂಗದಲ್ಲಿ ವಾಮ ಮಾರ್ಗದಲ್ಲಿ ಗೆದ್ದವರೇ ಡ್ರಗ್ಸ್ ದಾಸರು ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಗ್ಗೇಶ್, ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವವರು ಎಲ್ಲೇ ಇದ್ದರೂ ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ! ನನ್ನ ಬದುಕು ಎನ್ನುವವರು ಮಠಕ್ಕೆ ಸೇರಿಸಿದರು. ನಶೆ, ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ. ಏಕ್ ಮಾರ್ ದೋ ತುಕಡಾ. ತಪ್ಪು ಮಾಡಿದವರ ಬೆತ್ತಲೆ ಮಾಡಿ, ಆಗಲಾದರು ಜನಕ್ಕೆ ಅರಿವಾಗಲಿ ಎಂದು ಕಿಡಿಕಾರಿದ್ದಾರೆ.

ಶ್ರೇಷ್ಠ ಮನುಜನ್ಮ, ಅದು ನಶ್ವರ ಸತ್ಯ. ಆದರೂ ಆ ನಶ್ವರದೇಹ ನಶಿಸುವ ಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ ಹಾದರದ ಹಿಂದೆ ಬರಿ ಸಿನಿಮಾ ಅಲ್ಲ, ಸಮಾಜವೇ ಆಕರ್ಷಿತ ಆಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪು ದಾರಿ ತುಳಿಯದು. ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೇ ನಶೆ ಹಾದರದ ದಾಸರು! ಉಪ್ಪು ತಿಂದವ ನೀರು ಕುಡಿಯುತ್ತಾನೆ ಎಂದು ಮಾರ್ಮಿಕ ಸಂದೇಶ ನೀಡಿದ್ದಾರೆ.

ನಾನು ಈ ಕಾಲಘಟ್ಟದ ವೇಸ್ಟ್ ಬಾಡಿ ! ಕಾರಣ ನನ್ನ ಯೋಗ್ಯತೆ ರಾಗಿ ಮುದ್ದೆ ಬಸ್ಸಾರು ಗಿರಾಕಿ ಎಂದು! ಹಣ ಇಟ್ಕೊಂಡು ಏನ್ಮಾಡ್ತೀರ? ಸತ್ತ ಮೇಲೆ ಯಾವುದು ಬರಲ್ಲಾ. ಎಂಜಾಯ್ ಮಾಡಿ ಬಾಸ್ ಅನ್ನುತ್ತಾರೆ. ಪರವಾಗಿಲ್ಲ, ನನ್ನ ನಲ್ಮೆಯ ಶ್ರೀಕೃಷ್ಣನ ಗೀತೆಯಂತೆ ರಾಯರ ಆದರ್ಶದಂತೆ ಬದುಕಿ ಸಾಯುವೆ! ಸತ್ತರು ಹಣ ಅಧಿಕಾರ ಹಾದರದ ಹಿಂದೆ ಹೋಗೆನು! ನನಗೆ ಬಣ್ಣದ ಬದುಕೆ ಸ್ವರ್ಗ ಎಂದು ಮತ್ತೊಂದು ಟ್ವೀಟ್‍ನಲ್ಲಿ ಡ್ರಗ್ಸ್ ಜಾಲದ ಕರಾಳ ಮುಖವನ್ನು ಜಗ್ಗೇಶ್ ಅನಾವರಣಗೊಳಿಸಿದ್ದಾರೆ.








