ರಷ್ಯಾದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಈವರೆಗೂ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. ಅಮೆರಿಕ, ಬ್ರೆಜಿಲ್, ಭಾರತದ ನಂತರದ ಸ್ಥಾನದಲ್ಲಿರುವ ರಷ್ಯಾದಲ್ಲಿ ಕೊರೊನಾಗೆ ಲಸಿಕೆ ಕಂಡುಹಿಡಿಯಲಾಗಿದೆ ಎಂದು ರಾಷ್ಟ್ರದ ಅಧ್ಯಕ್ಷ ವ್ಲ್ಯಾಡಿಮಿರ್ ಪುಟಿನ್ ಅವರು ಹೇಳಿಕೊಂಡಿದ್ದಾರೆ. ಈಗಾಗಲೇ ಸೇನಾ ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಲಸಿಕೆಯನ್ನು ಬಳಸಲಾಗುತ್ತಿದೆ.
ಮತ್ತೊಂದೆಡೆ ಕೊರೊನಾ ಆತಂಕದ ನಡುವೆಯೂ ರಷ್ಯಾದ ಹಲವು ನಗರಗಳಲ್ಲಿ ಲಾಕ್‍ಡೌನ್ ಹಿಂಪಡೆಯಲಾಗಿದ್ದು, ಬಹುತೇಕ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ-ವಹಿವಾಟು ಆರಂಭಗೊಂಡಿದೆ.








