ಯೆಸ್ ಬ್ಯಾಂಕ್ ಬಿಕ್ಕಟ್ಟು ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿರತೆ ಬಗ್ಗೆ ಅನುಮಾನ ಮೂಡಿಸಿದೆ. ಇದು ದೇಶೀಯ ಹೂಡಿಕೆದಾರರ ಸಂಕಷ್ಟಗಳಿಗೆ ಕಾರಣವಾಗಿದೆ ಎನ್ನಬಹುದು. ಕಳೆದ 6 ತಿಂಗಳಲ್ಲಿ ದಿವಾನ್ ಹೌಸಿಂಗ್ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ನಂತರ ಇದೀಗ ಯೆಸ್ ಬ್ಯಾಂಕ್ ದೇಶದ ಜನರನ್ನು ಬ್ಯಾಂಕಿಂಗ್ ಕ್ಷೇತ್ರದ ಮೇಲೆ ನಂಬಿಕೆ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ.
ಅನೇಕ ಹಣಕಾಸು ಘಟಕಗಳು ಯೆಸ್ ಬ್ಯಾಂಕ್ ಬಾಂಡ್ಗಳ ಮೇಲೆ ಬಂಡವಾಳ ವಿನಿಯೋಗಿಸಿವೆ. ಆದರೆ ಇದೀಗ ಪ್ರಪಂಚದ ಅನೇಕ ರೇಟಿಂಗ್ ಏಜೆನ್ಸಿಗಳ ಜೊತೆ ನಮ್ಮ ದೇಶದ ರೇಟಿಂಗ್ ಏಜನ್ಸಿ ಇಕ್ರಾ 52,612 ಕೋಟಿ ರೂ.ಗಳ ಮೌಲ್ಯದ ದುರ್ಬಲಗೊಂಡ ಬ್ಯಾಂಕಿನ ಬಾಂಡ್ಗಳನ್ನು ಡೌನ್ ಗ್ರೇಡ್ ಮಾಡಿದೆ. ಈಗಾಗಲೇ ಶ್ರೇಣಿ -1 ಬಾಂಡ್ಗಳ ಮೇಲೆ ಕೂಪನ್ ಪಾವತಿಯನ್ನು ಯೆಸ್ ಬ್ಯಾಂಕ್ ಮಾಡದೇ ಇರುವ ಕಾರಣ ಮುಂಬರುವ ಸಮಯದಲ್ಲಿ ಎಸ್ ಬಿ ಐ ಯಾವ ರೀತಿ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ. ವಿದೇಶಿ ಹೂಡಿಕೆದಾರರು ನಿರಂತರ ಮಾರಾಟವು ದಲಾಲ್ ಸ್ಟ್ರೀಟ್ನ ಕರಡಿಯ ಆರ್ಭಟವನ್ನು ಜೋರಾಗಿಸಿದೆ. ಕಳೆದ ಕೆಲವು ದಿನಗಳಿಂದ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತೀಯ ಷೇರುಗಳಿಂದ 20 ಸಾವಿರ ಕೋಟಿಗಿಂತಲೂ ಅಧಿಕ ಮಾರಾಟ ಮಾಡಿ ಬಂಡವಾಳ ವಾಪಸ್ ತೆಗೆದುಕೊಂಡಿರುವುದು ಷೇರು ಮಾರುಕಟ್ಟೆ ಪತನಕ್ಕೆ ಕಾರಣವಾಗಿದೆ.
ಜಗತ್ತಿನಾದ್ಯಂತದ ಪ್ರಮುಖ ಇಕ್ವಿಟಿ ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸಿ, ಕರಡಿಯ ಆಟ ಮುಂದುವರಿಸಿದೆ. ಇದು ದಲಾಲ್ ಸ್ಟ್ರೀಟ್ನಲ್ಲಿನ ಹೂಡಿಕೆದಾರರನ್ನು ನಿರುತ್ಸಾಹಗೊಳಿಸಿದವು. ಜಪಾನ್ನ ನಿಕ್ಕಿ ಶೇಕಡಾ 5.2 ಮತ್ತು ಆಸ್ಟ್ರೇಲಿಯಾದ ಸರಕು-ಭಾರೀ ಮಾರುಕಟ್ಟೆ ಶೇ 6.4 ರಷ್ಟು ಕುಸಿದಿದೆ.
ಜಪಾನ್ನ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಎಂಎಸ್ಸಿಐನ ವಿಶಾಲ ಸೂಚ್ಯಂಕವು 2015 ರ ಅಂತ್ಯದ ನಂತರದ ಕೆಟ್ಟ ದಿನದಲ್ಲಿ ಶೇಕಡಾ 3.9 ರಷ್ಟು ನಷ್ಟವನ್ನು ಕಂಡರೆ, ಶಾಂಘೈ ನೀಲಿ ಚಿಪ್ಸ್ ಶೇಕಡಾ 2.8 ರಷ್ಟು ಕುಸಿದಿದೆ.
ಒಟ್ಟಿನಲ್ಲಿ ಕೊರೊನಾ, ಒಪೆಕ್, ಬ್ಯಾಂಕಿಂಗ್ ವ್ಯವಸ್ಥೆಯ ಅಸ್ಥಿರತೆ, ಜಾಗತಿಕ ಮಾರುಕಟ್ಟೆಗಳು ಕುಸಿತ ದೇಶದ ಮಾರುಕಟ್ಟೆಯ ಮೇಲೆ ಬೇರೆ ಬೇರೆ ರೀತಿ ಪ್ರಮಾಣ ಬೀರಿದೆ.