ಬೆಂಗಳೂರು: ನಟಿ ಸಂಜನಾ ಗರ್ಲಾನಿ ಯಾರು ಎಂಬುಬರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಗೊತ್ತು. ಹೀಗಾಗಿ ಸಂಜನಾ ಬಗ್ಗೆ ಮಾತನಾಡಿ ನನ್ನ ಬಾಯಿ ಗಲೀಜು ಮಾಡಿಕೊಳ್ಳಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಬರಗಿ, ಸಂಜನಾ ಆಪ್ತ ರಾಹುಲ್‍ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಟಿ.ವಿಗಳಲ್ಲಿ ಬರುತ್ತಿರುವ ಸುದ್ದಿ ನೋಡಿದೆ. ಸಂಜನಾ ಏನು ಅಂತ ನನಗೆ ಗೊತ್ತು. ಆದರೂ ನಾನು ಯಾರ ಬಗ್ಗೆಯೂ ಮಾತನಾಡಿದ ತೇಜೋವವಧೆ ಮಾಡುವ ಉದ್ದೇಶ ಇಲ್ಲ ಎಂದಿದ್ದಾರೆ.
ರಾಗಿಣಿ ದ್ವಿವೇದಿ ಎನ್ ಘಮ ಘಮ ಎಂದು ನಾರುತ್ತಿದ್ದಳಾ..ರಾಗಿಣಿ ಯುಬಿ ಸಿಟಿ ತುಂಬಾ ಓಡಾಡಿದ್ದಾರೆ. ಆರ್‍ಇಒ ಇನ್ಸ್‍ಪೆಕ್ಟರ್ ಜತೆ ಮದುವೆಯಾಗುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು. ಅವರು ಯುಬಿ ಸಿಟಿಯಲ್ಲಿ ಓಡಾಡಿದ್ದು ನನಗೆ ಗೊತ್ತಿದೆ ಎಂದು ಸಂಬರಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಾನು ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿಲ್ಲ. ಆದರೆ. ನಾನು ನನ್ನ ಸಾಮಥ್ರ್ಯಕ್ಕೆ ತಕ್ಕಂತೆ ಸಣ್ಣ ಸಣ್ಣ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ.








