ದಾವಣಗೆರೆ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸ್ಫೋಟಕ ಸಂಗತಿಗಳು ಹೊರ ಬರುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸತ್ತಿದ್ದೂ ಕೂಡ ಸತ್ತಿದ್ದೂ ಡ್ರಗ್ ನಿಂದಲೇ ಎನ್ನುವುದು ಜಗಜ್ಜಾಹೀರಾಗಿದೆ. ಸಿದ್ದರಾಮಯ್ಯ ಅವರಿಗೆ ಯುವ ಜನತೆಯೆ ಬಗ್ಗೆ ಕಿಂಚಿತ್ ಕಾಳಜಿ ಇದ್ದಿದ್ದರೆ ಡ್ರಗ್ಸ್ ದಂಧೆಗೆ ಅಂದೇ ಕಡಿವಾಣ ಹಾಕಬೇಕಿತ್ತು ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಡ್ರಗ್‍ನ ಹಣದಿಂದಲೇ ನಮ್ಮ ಸರ್ಕಾರ ಕೆಡವಿದ್ದಾರೆ ಎಂದು ಗಂಭೀರ ಆರೋಪ ಮಾಡ್ತಾರೆ. ಹಾಗಾದ್ರೆ ಇಂದ್ರಜಿತ್ ಲಂಕೇಶ್ ರೀತಿ ಕುಮಾರಸ್ವಾಮಿ ಅವರನ್ನು ವಿಚಾರಣೆ ನಡೆಸಿ ಎಂದು ಆಗ್ರಹಿಸಿದರು.
ಇಂದ್ರಜಿತ್ ಲಂಕೇಶ್‍ಗೆ ಮತ್ತೊಮ್ಮೆ ಕೌಂಟರ್ ನೀಡಿದ ಪ್ರಮೋದ್ ಮುತಾಲಿಕ್, ಗೌರಿ ಲಂಕೇಶ್ ಹತ್ಯೆಯಲ್ಲಿ ನಮ್ಮ ಕೈವಾಡ ಇಲ್ಲ. ಕೇವಲ ಆರೋಪ ಮಾಡುತ್ತಿರುವ ಇಂದ್ರಜಿತ್ ಲಂಕೇಶ್ ನಿಮ್ಮ ಹೇಳಿಕೆ ವಾಪಸ್ಸು ತೆಗೆದುಕೊಳ್ಳಿ. ಗೌರಿ ಲಂಕೇಶ್ ಹತ್ಯೆಯಲ್ಲಿ ಯಾವುದೇ ಹಿಂದೂ ಸಂಘಟನೆಗಳು ಕೂಡ ಕೈವಾಡವಿಲ್ಲ ಎಂದರು.
ಗೌರಿ ಲಂಕೇಶ್ ಅವರು ಡ್ರಗ್ ಅಡಿಕ್ಟ್ ಆಗಿದ್ರೋ ಇಲ್ಲೋ ಹೇಳಿ. ಅದಕ್ಕೆ ಮೊದಲು ಸ್ಪಷ್ಟನೆ ನೀಡಿ. ಗೌರಿ ಲಂಕೇಶ್ ಎಲ್ಲಿ ಹೋಗ್ತಾ ಇದ್ರು, ಎಲ್ಲಿ ಡ್ರಗ್ ಸೇವನೆ ಮಾಡ್ತಾ ಇದ್ರು, ಯಾವ ಪಬ್‍ಗೆ ಹೋಗ್ತಾ ಇದ್ರು ಎನ್ನುವುದನ್ನು ನಾನು ಪ್ರೂವ್ ಮಾಡ್ತಿನಿ ಎಂದು ಮುತಾಲಿಕ್ ಸವಾಲು ಹಾಕಿದ್ದಾರೆ.
ಪೆÇಲೀಸರಿಗೆ ಹಾಗೂ ಡ್ರಗ್ ಮಾಫಿಯಾದ ಲಿಂಕ್ ಇದೆ. ಎಲ್ಲೆಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ರಾಜಕೀಯ ಶಕ್ತಿಗಳು ಇವರ ಕೈ ಕಟ್ಟಿ ಹಾಕುತ್ತಿದ್ದಾರೆ. 2009ರಲ್ಲಿ ಪಬ್ ಗಲಾಟೆಯಾದಾಗ ಇದನ್ನು ತಡೆಗಟ್ಟಬಹುದಿತ್ತು. ನಾನು ಆಗಲೇ ಪಬ್‍ಗಳಲ್ಲಿ ಡ್ರಗ್ ನಡೆಯುತ್ತದೆ ಎಂದು ಹೇಳಿದಾಗ ನನ್ನನ್ನು ಜೈಲಿಗೆ ಹಾಕಿದ್ರು.
ಶಾಸಕ ಹ್ಯಾರಿಸ್ ಮಗ ನಲಪಾಡ್ ಗಲಾಟೆಯಾಯ್ತು, ಆಗ ಶೋಭಾ ಕರಂದ್ಲಾಜೆ ಡ್ರಗ್ ವಿಚಾರದಲ್ಲಿ ಗಲಾಟೆಯಾಗಿದೆ ಎಂದಿದ್ದರು. ಈಗ ನಿಮ್ಮ ಸರ್ಕಾರವಿದೆ, ಈಗ ಏನ್ ಮಾಡ್ತೀರಾ ನೋಡಿ ಪ್ರಶ್ನಿಸಿದ್ದಾರೆ.








