ಬೆಂಗಳೂರು : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನದ ಗಾಥೆಯ ಕುರಿತಾದ ಮಹಾನಾಯಕ ಧಾರವಾಹಿವನ್ನು ನಿಲ್ಲಿಸುವಂತೆ ವಾಹಿನಿ ಮೇಲೆ ಕೆಲವರು ಒತ್ತಡ ಹೇರುತ್ತಿದ್ದಾರಂತೆ. ಬಾಬಾ ಸಾಹೇಬರ ಕುರಿತ ಮಹಾನಾಯಕ ಧಾರವಾಹಿಯನ್ನು ನಿಲ್ಲಿಸುವಂತೆ ಮಧ್ಯರಾತ್ರಿ ಕೆಲವರು ಕರೆ ಮಾಡಿ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಘವೇಂದ್ರ ಹುಣಸೂರು, ಮಹಾನಾಯಕ ಧಾರವಾಹಿ ಪ್ರಸಾರ ನಿಲ್ಲಿಸುವಂತೆ ಹಲವಾರು ಮೆಸೇಜ್ ಗಳು ಮತ್ತು ಕರೆಗಳು ಬರುತ್ತಿವೆ. ಇಂತಹ ಯಾವುದೇ ಬೆದರಿಕೆಗೆ ಹೆದರುವುದಿಲ್ಲ. ಮಹಾನಾಯಕ ಧಾರವಾಹಿ ನಿಲ್ಲುವುದಿಲ್ಲ. ಮಹಾನಾಯಕ ನಮ್ಮ ಹೆಮ್ಮೆಯಾಗಿದೆ. ಅದರ ಬಗ್ಗೆ ನಮಗೆ ವೈಯಕ್ತಿಕವಾಗಿ ಬಹಳ ಪ್ರೀತಿಯಿದೆ ಎಂದು ಬರೆದುಕೊಂಡಿದ್ದಾರೆ.
— Raghavendra Hunsur (@Raghav_Hunsur) September 3, 2020








