ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ವರುಣ ಅಬ್ಬರ ಜೋರಾಗಿದೆ. ಮೊಳಕಾಲ್ಮೂರು ತಾಲೂಕು ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಾಳೆಯಾಗಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಮೊಳಕಾಲ್ಮೂರು ತಾಲೂಕಿನ ವಿವಿಧೆಡೆ ಕಳೆದ ರಾತ್ರಿ ಉತ್ತಮ ಮಳೆಯಾಗಿದೆ. ತಳವಾರ ಹಳ್ಳಿ ಬಳಿಯ ಸಿದ್ಲಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ಪಕ್ಕುರ್ತಿ ಕೆರೆ ತುಂಬಿದ್ದು ಭರ್ತಿಯಾಗಿ ಕೋಡಿ ಬಿದ್ದಿದೆ. ಕಳೆದ 8 ವರ್ಷಗಳ ಬಳಿಕ ಪಕ್ಕುರ್ತಿ ಕೆರೆ ತುಂಬಿ ಕೋಡಿ ಬಿದ್ದಿದೆ. ಗುಂಡೇರ ಹಳ್ಳದ ಮೂಲಕ ರಾಂಪುರ ಕೆರೆಯತ್ತ ನೀರು ಹರಿಯುತ್ತಿದೆ. ಹೀಗಾಗಿ ಪಕ್ಕುರ್ತಿ ಕೆರೆಯ ದಡದಲ್ಲಿರುವ ಜಿಲ್ಲಾಧಿಗೊಂದಿ ಪ್ರದೇಶದ ಜನರು ನೀರಿಗೆ ಇಳಿಯುವುದು, ತೆಪ್ಪದಲ್ಲಿ ಸಂಚಾರ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.








