ದೇಶದಲ್ಲಿ ಎನ್.ಪಿ.ಆರ್ ಜಾರಿ ಮಾಡಲು ಬಿಡುವುದಿಲ್ಲ ಎಂಬ ನಿರ್ಣಯವೊಂದನ್ನು ರಾಜ್ಯ ಕಾಂಗ್ರೆಸ್ ಪಾಸು ಮಾಡಿದೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಇಂದು ಶಾಸಕಾಂಗ ಸಭೆ ನಡೆದಿದೆ. ಸಭೆಯಲ್ಲಿ ದೇಶ ಮತ್ತು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎನ್.ಪಿ.ಆರ್., ಎನ್.ಆರ್.ಸಿ, ಮತ್ತು ಸಿಏಏ ವಿರೋಧಿಸಿ ನಡೆದ ಚಳುವಳಿಗಳ ಬಗ್ಗೆ ಗಂಬೀರವಾಗಿ ಚರ್ಚೆ ಮಾಡಲಾಗಿದೆ ಚರ್ಚೆಯ ಬಳಿಕ ದೇಶದಲ್ಲಿ ಎನ್.ಪಿ.ಆರ್ ಜಾರಿ ಮಾಡಲು ಬಿಡುವುದಿಲ್ಲ ಎಂಬ ನಿರ್ಣಯವನ್ನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಪಾಸ್ ಮಾಡಲಾಗಿದೆ. ಈ ಬಗ್ಗೆ ನೂತನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಶಾಸಕ ಈ ತುಕರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯಕ್ಕೆ ಇಡಿ ಶಾಕ್: 4 ರಾಜ್ಯಗಳ 19 ಕಡೆ ಮಹಾ ದಾಳಿ, ಮಾಲೀಕ ಬಾಬು ಪರಾರಿ
ಹಳೆಯ ಚಿನ್ನ ಖರೀದಿ ಮತ್ತು ಅಡವಿಟ್ಟ ಚಿನ್ನ ಬಿಡಿಸಿಕೊಡುವ ಹೆಸರಿನಲ್ಲಿ ಜನಪ್ರಿಯವಾಗಿದ್ದ ಅಟ್ಟಿಕಾ ಗೋಲ್ಡ್ ಕಂಪನಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅಕ್ರಮ ಹಣ...








