ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ನಟಿ ರಾಗಿಣಿ ದ್ವಿವೇದಿ ಡ್ರಗ್ ಆಡಿಕ್ಟ್ ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ನಟಿ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿದ್ದು, ಇಂದು ಸಿಸಿಬಿ ಕಸ್ಟಡಿ ಅಂತ್ಯವಾಗುತ್ತಿದೆ. ಈ ನಡುವೆ ನಟಿ ರಾಗಿಣಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಸಂಗತಿ ಸಿಸಿಬಿ ಪೊಲೀಸರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಡ್ರಗ್ಸ್ ಪೆಡ್ಲರ್ ಆಫ್ರಿಕನ್ ಪ್ರಜೆ ಲೂಮ್ ಪೆಪ್ಪರ್ ನಿಂದಲೇ ರಾಗಿಣಿ ಡ್ರಗ್ಸ್ ಖರೀದಿ ಮಾಡಿ ಸೇವನೆ ಮಾಡುತ್ತಿದ್ದರಲ್ಲದೆ, ಪಾರ್ಟಿಗಳಿಗೆ ಹೋಗುವಾಗಲೂ ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದಳು ಎಂದು ಎಂಬ ಸಂಗತಿ ಬೆಳಕಿಗೆ ಬಂದಿದೆ.
xtc -3 ಮಾತ್ರೆಯನ್ನು ರಾಗಿಣಿ ಆಗಾಗ್ಗ ತರಿಸಿಕೊಳ್ಳುತ್ತಿದ್ದಳಂತೆ. ಒಂದು ಮಾತ್ರೆಗೆ 3 ಸಾವಿರ ಕೊಟ್ಟು ಲೂಮ್ ಪೆಪ್ಪರ್ ನಿಂದ ಖರೀದಿ ಮಾಡುತ್ತಿದ್ದಳಂತೆ.
ಇತ್ತೀಚೆಗೆ ಅಂದರೆ ಆಗಸ್ಟ್ 22, 23, 24ರಂದು ಸಸತ ಮೂರು ದಿನ ರಾಗಿಣಿ ಲೂಮ್ ಪೆಪ್ಪರ್‍ನಿಂದ ಡ್ರಗ್ ಖರೀದಿ ಮಾಡಿದ್ದಳಂತೆ.
ಲೂಮ್ ಪೆಪ್ಪರ್‍ನಿಂದ ಕಾರು ಚಾಲಕ ಇಮ್ರಾನ್ ಖಾನ್ ಮೂಲಕ ಡ್ರಗ್ ತರಿಸಿಕೊಳ್ಳುತ್ತಿದ್ದ ರಾಗಿಣಿ, ಇಮ್ರಾನ್ ರಜೆಯಲ್ಲಿದ್ದಾಗ ತಾನೇ ನೇರವಾಗಿ ಹೋಗಿ ಡ್ರಗ್ಸ್ ಪಡೆದುಕೊಳ್ಳುತ್ತಿದ್ದಳು ಎನ್ನಲಾಗಿದೆ.
ಇತ್ತೀಚೆಗೆ ಲೂಮ್ ಪೆಪ್ಪರ್ ಹಾಗೂ ರಾಗಿಣಿ ನಡುವಿನ ವಾಟ್ಸ್ ಆಪ್ ಚಾಟ್‍ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಐ ನೀಡ್ ಮೋರ್(i need more) ಎಂದು ಲೂಮ್ ಪೆಪ್ಪರ್‍ಗೆ ಮೆಸೇಜ್ ಹಾಕುತ್ತಿದ್ದ ರಾಗಿಣಿಗೆ ಲೂಮ್ ಪೆಪ್ಪರ್ ಹೌ ಮಚ್(how much) ಎಂದು ಎಂದು ಮೆಜೇಸ್ ಮಾಡಿದ್ದ. ಬಳಿಕ ವಾಟ್ಸ್ ಆಪ್ ಕಾಲ್ ಮಾಡಿದ್ದ ರಾಗಿಣಿ, ನಂತರ ಡೆಲಿವರ್ ಟು ಯಲಹಂಕಾ ಎಂದು ಮೆಸೇಜ್ ಮಾಡಿ ಡ್ರಗ್ಸ್ ತರಿಸಿಕೊಂಡಿದ್ದಳು ಎಂದು ಮೂಲಗಳು ತಿಳಿಸಿವೆ.
ಐ ನೀಡ್ ಮೋರ್ ಎಂದು ರಾಗಿಣಿ ಕೇಳಿದ್ದು ಏನನ್ನು.. ಎಷ್ಟು ಡ್ರಗ್ ಪಡೆದಿದ್ದಳು ಎಂಬುದರ ಬಗ್ಗೆ ಸಿಸಿಬಿ ವಿಚಾರಣೆ ನಡೆಯುತ್ತಿದೆ.