ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಎನ್ ಡಿಎ ಮೈತ್ರಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಇದೆ. ನವೆಂಬರ್ 13ರಂದು ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಉಪಚುನಾವಣೆ (BY Election) ನಡೆಯಲಿದೆ. ಈ ಪೈಕಿ ಜೆಡಿಎಸ್ ಗೆ ಚನ್ನಪಟ್ಟಣ ಕ್ಷೇತ್ರ ಮಹತ್ವ ಪಡೆದಿದ್ದು, ಜೆಡಿಎಸ್ (JDS) ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
40 ಜನರ ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರಿಗೆ ಕೊಕ್ ನೀಡಲಾಗಿದೆ.
ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂಬ ಒತ್ತಾಯದ ವಿಚಾರಕ್ಕೆ ಸಂಬಂಧಿಸಿದಂತೆ ಜಿ.ಟಿ ದೇವೇಗೌಡರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಮಾತನಾಡುವಾಗ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜಿ.ಟಿ. ದೇವೇಗೌಡ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆಗೆ ಸ್ಟಾರ್ ಪ್ರಚಾರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಆದರೆ, ಜಿ. ಪುತ್ರ ಜಿ.ಡಿ ಹರೀಶ್ ಗೌಡಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಹೆಚ್.ಡಿ ರೇವಣ್ಣ, ಮಾಜಿ, ಹಾಲಿ ಸಂಸದರು ಸೇರಿದಂತೆ 40 ಜನ ಪಟ್ಟಿಯಲ್ಲಿದ್ದಾರೆ. ದೇವೇಗೌಡ – ರಾಷ್ಟ್ರೀಯ ಅಧ್ಯಕ್ಷ, ಕುಮಾರಸ್ವಾಮಿ – ಕೇಂದ್ರ ಸಚಿವ, ರಾಜ್ಯಾಧ್ಯಕ್ಷ, ಸುರೇಶ್ ಬಾಬು – ಶಾಸಕಾಂಗ ನಾಯಕ, ಅನಿತಾ ಕುಮಾರಸ್ವಾಮಿ – ಮಾಜಿ ಶಾಸಕಿ, ಸಾ.ರಾ. ಮಹೇಶ್- ಮಾಜಿ ಸಚಿವ, ಪುಟ್ಟರಾಜು – ಮಾಜಿ ಸಚಿವ, ಹರೀಶ್ ಗೌಡ – ಶಾಸಕ, ಜಟಿಡಿ ಪುತ್ರ, ಮಲ್ಲೇಶ್ ಬಾಬು – ಸಂಸದ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.