ತಿರುಪತಿ – ಒಂದೇ ದಿನದಲ್ಲಿ ಒಂದು ಕೋಟಿ ಮೀರಿದ ಹುಂಡಿ ಆದಾಯ
ತಿರುಪತಿ, ಸೆಪ್ಟೆಂಬರ್08: ತಿರುಪತಿ ದೇವಸ್ಥಾನದಲ್ಲಿ ಶನಿವಾರ ಒಂದೇ ದಿನದಲ್ಲಿ 1.02 ಕೋಟಿ ರೂ ಹುಂಡಿ ಆದಾಯವು ದಾಖಲಾಗಿದೆ.
ಲಾಕ್ಡೌನ್ ಪುನರಾರಂಭದ ನಂತರ ತಿರುಮಲ ಭಗವಾನ್ ಬಾಲಾಜಿ ದೇವಸ್ಥಾನದಲ್ಲಿ ಶನಿವಾರ ಒಂದು ದಿನ 1.02 ಕೋಟಿ ರೂ ಹುಂಡಿ ಆದಾಯವು ಮೊದಲ ಬಾರಿಗೆ ದಾಖಲಾಗಿದೆ.
ಪ್ರಕಟನೆವೊಂದರಲ್ಲಿ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಶನಿವಾರ ದೇವಾಲಯದ ಹುಂಡಿಗೆ 13,486 ಭಕ್ತರು ಅರ್ಪಿಸಿದ ಕಾಣಿಕೆಗಳನ್ನು ಭಾನುವಾರ ಎಣಿಸಲಾಗಿದೆ ಎಂದು ಹೇಳಿದೆ.
ಕೊರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಜೂನ್ 11 ರಂದು ತೆರವು ಗೊಳಿಸಲಾಗಿತ್ತು.