ಯಾದಗಿರಿ : ಸಾರಿ ಅಮ್ಮ ಮುಂದಿನ ಜನ್ಮದಲ್ಲಿ ನಿನ್ನ ಋಣ ತೀರಿಸುತ್ತೇನೆ. ಸಾರಿ ನನ್ನಿಂದ ತಪ್ಪಾಗಿದೆ, ಐ ಮಿಸ್ ಯು ಅಣ್ಣ. ಎಲ್ಲರನ್ನೂ ಬಿಟ್ಟು ಹೊರಟಿದ್ದೇನೆ ಎಂದು ಸೆಲ್ಫಿ ವಿಡಿಯೋ ಮಾಡಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ತಾಲೂಕಿನ ಗೊಂದಡಗಿ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ(21), ಮಹಾದೇವಿ (17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದು, ಇವರು ಕಳೆದ ಎರಡು ವರ್ಷಗಳಿಂದ ಗಾಢವಾಗಿ ಪ್ರೀತಿಸುತ್ತಿದ್ದರು. ಅನ್ಯ ಜಾತಿಯವರಾಗಿದ್ದರಿಂದ, ಹುಡುಗಿಯ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಪೋಷಕರು ಹನುಮಂತನನ್ನು ಪ್ರೀತಿ ಮಾಡುವುದನ್ನು ನಿಲ್ಲಿಸುವಂತೆ ಮಹಾದೇವಿಗೆ ಒತ್ತಾಯ ಮಾಡಿದ್ದರು. ಹೀಗಾಗಿ ಬುಧವಾರ ಗ್ರಾಮದ ಹೊರ ವಲಯದಲ್ಲಿರುವ ಕಲ್ಯಾಣಿಗೆ ಹಾರಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಪ್ರೇಮಿಗಳು ತಮ್ಮ ಕುಟುಂಬ ಹಾಗೂ ತಂದೆ, ತಾಯಿಯರ ಕ್ಷಮೆ ಕೇಳಿದ್ದಾರೆ. ಇಂದು ಇಬ್ಬರ ಮೃತದೇಹಗಳು ನೀರಿನಲ್ಲಿ ಮೇಲೆ ತೇಲಿದಾಗ ಆತ್ಮಹತ್ಯೆ ವಿಚಾರ ಬಹಿರಂಗವಾಗಿದೆ.








