ಮಂಡ್ಯ: ದೇವಸ್ಥಾನದಲ್ಲೇ ಮೂವರನ್ನು ಬರ್ಬರವಾಗಿ ಕೊಲೆ ನಡೆದಿರುವ ಘಟನೆ ಮಂಡ್ಯದ ಗುತ್ತಲಿನಲ್ಲಿ ನಡೆದಿದೆ. ಗುತ್ತಲು ಪ್ರದೇಶದಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಈ ಭೀಕರ ಘಟನೆ ನಡೆದಿದ್ದು ಸಕ್ಕರೆ ನಾಡು ಮಂಡ್ಯದ ಜನತೆ ಅಕ್ಷರಶಃ ಬೆಚ್ಚಿ ಬೀಳುವಂತೆ ಮಾಡಿದೆ. ಹುಂಡಿ ಕಳವು ಮಾಡಲು ಬಂದ ದುಷ್ಕರ್ಮಿಗಳು, ಪ್ರತಿರೋಧ ತೋರಿದ ದೇವಸ್ಥಾನದ ಮೂವರು ಕಾವಲುಗಾರರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಮಾಡಿದ್ದಾರೆ.
ಘಟನೆಯಲ್ಲಿ ಗಣೇಶ್, ಪ್ರಕಾಶ್ ಹಾಗೂ ಆನಂದ್ ಕೊಲೆಯಾಗಿದ್ದು, ದೇವಸ್ಥಾನದಲ್ಲಿ ತಮಟಿಗರಾಗಿ(ಸೆಕ್ಯುರಿಟಿ) ಕೆಲಸ ಮಾಡುತ್ತಿದ್ದರು. ಹುಂಡಿ ಕದ್ದೊಯ್ದು ದೂರದಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದೇವಸ್ಥಾನಗಳಲ್ಲಿ ಕಳ್ಳತನವನ್ನೇ ಕಸುಬಾಗಿ ಮಾಡಿಕೊಂಡಿದ್ದ ತಂಡದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಂಡ್ಯ ಡಿವೈಎಸ್ಪಿ ನವೀನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಒಂದೇ ವಾರದಲ್ಲಿ ಐವರ ಕೊಲೆ ನಡೆದಿರುವುದು ಮಂಡ್ಯ ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.
https://youtu.be/I5BRabD3f5A








