ಕಂಗನಾರನ್ನು ಭಗತ್ ಸಿಂಗ್ ಗೆ ಹೋಲಿಸಿದ ವಿಶಾಲ್..!
ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ನಟಿ ಕಂಗನಾ ರಣಾವತ್ ಬೆಂಬಲಕ್ಕೆ ನಿಂತಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದ್ದಿರುವ ಕಂಗನಾರನ್ನು ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಭಗತ್ ಸಿಂಗ್ ಗೆ ಹೋಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ವಿಶಾಲ್, “ಕಂಗನಾ, ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಧ್ವನಿ ಎತ್ತುವುದರಲ್ಲಿ ನಿಮಗೆ ಎರಡನೇ ಆಲೋಚನೆ ಇರಲ್ಲ. 1920ರಲ್ಲಿ ಭಗತ್ ಸಿಂಗ್ ಮಾಡಿದ ಹಾಗೆ. ನಿಮ್ಮ ವೈಯಕ್ತಿಕ ಸಮಸ್ಯೆ ಅಲ್ಲದಿದ್ದರೂ ಸರ್ಕಾರವನ್ನು ಎದುರಿಸಿ ನಿಲ್ಲುವ ಮೂಲಕ ಮಾದರಿಯಾಗಿದ್ದೀರಿ. ” ಎಂದಿದ್ದಾರೆ.
‘ಗೇಮ್ ಆಫ್ ಥ್ರೋನ್ಸ್’ ನ ಡಯಾನಾ ರಿಗ್ ನಿಧನ
ಗೇಮ್ ಆಫ್ ಥ್ರೋನ್ ಖ್ಯಾತಿಯ 82 ವರ್ಷದ ನಟಿ ಡಯಾನಾ ರಿಗ್ ಇಂದು ವಿಧಿವಶರಾಗಿದ್ದಾರೆ. ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಡಯಾನಾ ಅವರು ತಮ್ಮ ನಿವಾಸದಲ್ಲಿ ನಿದ್ರೆಗೆ ಜಾರಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ. ಡಯಾನಾ ಗೇಮ್ ಆಫ್ ಥ್ರೋನ್ಸ್, ಆನ್ ಹರ್ ಮೆಜೆಸ್ಟಿ ಸೀಕ್ರೆಟ್ ಸರ್ವೀಸ್ ಸೇರಿದಂತೆ ಹಲವಾರು ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು.
https://youtu.be/qjIpfEzwrHM
ರಿಯಾಗೇ ಜೈಲೇ ಗತಿ..!
ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಆರೋಪದಡಿ ಬಂಧನಕ್ಕೊಳಗಾಗಿರುವ ರಿಯಾ ಚಕ್ರವರ್ತಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಮುಂಬೈ ನ್ಯಾಯಾಲಯ ಇಂದು ಜಾಮೀನು ಅರ್ಜಿ ವಜಾಗೊಳಿಸಿದೆ. ಅಲ್ಲದೇ ಸಹೋದರ ಶೋಯಿ0ಕ್ ಚಕ್ರವರ್ತಿ, ಸುಶಾಂತ್ ಸಿಂಗ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಸೇರಿದಂತೆ ಇತರೆ ಆರೋಪಿಗಳ ಜಾಮೀನು ಅರ್ಜಿಯನ್ನೂ ನ್ಯಾಯಾಲಯವು ತಿರಸ್ಕರಿಸಿದೆ. ಈ ಮೂಲಕ ಸೆಪ್ಟೆಂಬರ್ 22 ರವರೆಗೆ ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನಲ್ಲೇ ದಿನಗಳೆಯುವುದು ಫಿಕ್ಸ್ ಆಗಿದೆ.
`ಡ್ರಗ್ಗಿಣಿ’ಗಿಲ್ಲ ರಿಲೀಫ್..!
ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು 33ನೇ ಸಿಸಿಹೆಚ್ ನ್ಯಾಯಾಲಯ ಸೆ.14ರವರೆಗೆ ಮುಂದೂಡಿದೆ.
ಇಂದು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಸಿಸಿಬಿ ಪೊಲೀಸರಿಗೆ ನೋಟಿಸ್ ನೀಡಿದೆ. ಕೋರ್ಟ್ ನೀಡಿದ ನೋಟಿಸ್‍ಗೆ ಸಿಸಿಬಿ ಪೊಲೀಸರು ಉತ್ತರ ನೀಡಬೇಕು ಅಥವಾ ಆಕ್ಷೇಪಣೆ ಸಲ್ಲಿಸಬೇಕು. ಪ್ರಕರಣದ ತನಿಖೆ ಕುರಿತ ಕೇಸ್ ಡೈರಿಯನ್ನು ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದ್ದು, ನಟಿ ರಾಗಿಣಿಗೆ ಸೆ.14ರವರೆಗೆ ಬಿಡುಗಡೆಯ ಭಾಗ್ಯವಾಗಲಿ, ರಿಲೀಫ್ ಆಗಲಿ ಸಿಕ್ಕಿಲ್ಲ.
‘ಮಾದಕ’ ತಾರೆಯರಿಬ್ಬರೂ ಕ್ಲೋಸ್ ಫ್ರೆಂಡ್ಸ್..!
ಡ್ರಗ್ ಕೇಸ್ ನಲ್ಲಿ ಅರೆಸ್ಟ್ ಆದ ಮೊದಲ ದಿನ ರಾಗಿಣಿ ಜತೆ ಜಗಳವಾಡಿದ್ದ ಸಂಜನಾ, ನಿನ್ನಿಂದಲೇ ನಾನು ಅರೆಸ್ಟ್ ಆಗುವ ಸ್ಥಿತಿ ಬಂದಿದೆ. `ಆರ್ ಯು ಹ್ಯಾಪಿ ನೌ ‘ಎಂದು ಕೂಗಾಡಿ ಕಣ್ಣೀರು ಹಾಕಿದ್ದಳಂತೆ. ಆದ್ರೆ, ಸಿಸಿಬಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಂದೇ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ರು. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಕಿತ್ತಾಡಿಕೊಂಡು ಹಾವು-ಮುಂಗಸಿಯಂತೆ ಆಡುತ್ತಿದ್ದವರು ಫ್ರೆಂಡ್ಸ್ ಆಗಿದ್ದಾರೆ. ಪರಸ್ಪರ ಮಾತನಾಡಿಕೊಂಡು ಒಬ್ಬರಿಗೊಬ್ಬರು ಹೆಲ್ಪ್ ಮಾಡಿಕೊಂಡಿದ್ದಾರಂತೆ.








