ADVERTISEMENT
Saturday, August 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕನಕಪುರ ಬಂಡೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು ಯಾಕೆ?

saaksha tv by saaksha tv
March 11, 2020
in Newsbeat, Politics, Samagra karnataka
Share on FacebookShare on TwitterShare on WhatsappShare on Telegram

ಟ್ರಬಲ್ ಶೂಟರ್ ಎಂದು ಕರೆಸಿಕೊಳ್ಳುವ ಡಿ.ಕೆ ಶಿವಕುಮಾರ ಕಾಂಗ್ರೆಸ್ ಪಾಲಿನ ಆಪತ್ಬಾಂಧವ. ಯಾಕೆಂದರೆ ಕಾಂಗ್ರೆಸ್ ಹೈಕಮಾಂಡ್ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಡಿಕೆಶಿ ಹೈಕಮಾಂಡ್ ಗೆ ತಮ್ಮ ನಿಷ್ಠೆ ತೋರಿದ್ದಾರೆ. ಪಕ್ಷ ವಹಿಸಿದ ಕೆಲಸವನ್ನು ಕಾಯ, ವಾಚಾ, ಮನಸಾ ಮಾಡಿದ್ದಾರೆ. ಹೈಕಮಾಂಡ್ ಗೆ ಕರ್ನಾಟಕದ ಬಲಗೈ ಬಂಟನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಮಹಾರಾಷ್ಟ್ರದಲ್ಲಿ ದಿ. ವಿಲಾಸ್ ರಾವ್ ದೇಶಮುಖ್ ಸರ್ಕಾರವಿತ್ತು. ಆ ವೇಳೆ ಬಹುಮತ ಸಾಬೀತು ಪಡಿಸುವ ವೇಳೆ ಶಾಸಕರನ್ನು ಉಳಿಸಿಕೊಳ್ಳಲು ದೇಶಮುಖ್ ಕೃಷ್ಣ ಸಹಾಯ ಕೋರಿದ್ದಾಗ ಕೃಷ್ಣ ಸಂಪುಟ ಸದಸ್ಯರಾಗಿದ್ದ ಶಿವಕುಮಾರ್, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟ್ ನಲ್ಲಿ ಉಳಿಸಿಕೊಂಡು ವಾಪಸ್ ಕಳುಹಿಸಿದ್ದರು. ಅಂದು ವಿಲಾಸರಾವ್ ದೇಶಮುಖ್ ಸರ್ಕಾರ ವಿಶ್ವಾಸಮತವನ್ನು ಗೆದ್ದಿತ್ತು.

2017 ರಲ್ಲಿ ಗುಜರಾತ್ ನ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಅಲ್ಲಿಯ ಶಾಸಕರನ್ನು ಕರೆ ತಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿಸಿದ್ದರು. ಈ ವೇಳೆ ಶಾಸಕರ ಉಳಿದಿದ್ದ ಹೊಟೇಲ್ ಮೇಲೆ ಐಟಿ ದಾಳಿ ನಡೆದಿತ್ತು. ಇದಾದ ಬಳಿಕ ಹವಾಲ ದಂಧೆ ಆರೋಪ ಎದುರಿಸಿದ್ದರು. ಇಡಿಯಿಂದ ಡಿಕೆಶಿ ಸೇರಿದಂತೆ ಅವರ ಕುಟುಂಬದವರಿಗೂ ವಿಚಾರಣೆ ನೆಪದಲ್ಲಿ ಬಂದ ಸಂಕಷ್ಟಗಳನ್ನು ಎದುರಿಸಿದ್ದರು. ಇದಕ್ಕೂ ಮೊದಲು ಬಿಜೆಪಿಗೆ ಬರುವಂತೆ ಆಹ್ವಾನ ಬಂದಿದ್ದರು ಸಹ ಕಾಂಗ್ರೆಸ್ ಬಿಟ್ಟು ಹೋಗುವ ಪ್ಲ್ಯಾನ್ ಮಾಡಲಿಲ್ಲ. ಸದಾ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಂಡು ಹೈಕಮಾಂಡ್ ನೀಡಿದ ಕೆಲಸ ಮಾಡುತ್ತಾ ಬಂದಿದ್ದಾರೆ. ಇಷ್ಟೇಲ್ಲಾ ಸಂಕಷ್ಟ ಬಂದರು ಪಕ್ಷ ನಿಷ್ಠೆ ಮಾತ್ರ ಡಿಕೆಶಿ ಮರೆಯಲಿಲ್ಲ. ಇದರ ನಡುವೆ ಡಿಕೆಶಿ ಬಳ್ಳಾರಿ ಬೈ ಎಲೆಕ್ಷನ್ ನಲ್ಲಿ ವಿ,ಎಸ್ ಉಗ್ರಪ್ಪರನ್ನು ಗೆಲ್ಲಿಸಿಕೊಂಡು ಬಂದು ತನ್ನ ತಾಕತ್ತು ಪ್ರದರ್ಶನ ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಸರ್ಕಾರವನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಸರ್ಕಾರ ಉರುಳಿಸಲು 15 ಶಾಸಕರು ಮುಂಬೈನಲ್ಲಿ ಬೀಡು ಬಿಟ್ಟಿದ್ದರು. ಆಗ ಡಿಕೆಶಿ ಕೆಲ ಸಚಿವರೊಂದಿಗೆ ಮುಂಬೈನಿಂದ ಶಾಸಕರನ್ನು ಕರೆ ತರುವ ಪ್ರಯತ್ನ ನಡೆಸಿದ್ದರು. ಮಳೆ, ಗಾಳಿ , ಬಿಸಿಲು ಎನ್ನದೆ ಪಕ್ಷದ ಕೆಲಸ ಮಾಡಿದರು. ಇಡಿ ವಿಚಾರಣೆ ಸಮಯದಲ್ಲಿ ಸಾಕಷ್ಟು ಮಾನಸಿಕ ಒತ್ತಡಗಳು ಡಿಕೆಶಿ ಗೆ ಎದುರಾದವು. ಅಲ್ಲದೆ 52 ದಿನಗಳ ಕಾಲ ಸೆರೆಮನೆವಾಸ ಅನುಭವಿಸಿ ಹೊರ ಬಂದರು. ಐಟಿ ದಾಳಿಗೆ ಭಯಗೊಂಡ ಕೆಲ ಶಾಸಕರು ಬಿಜೆಪಿ ಪಕ್ಷ ಸೇರಿದ್ದಾರೆ ಎನ್ನುವ ಮಾತಿದೆ. ಆದರೆ ಡಿಕೆಶಿಗೆ ಇಷ್ಟೆಲ್ಲ ಸಂಕಷ್ಟ ಎದುರಾದರು ಪಕ್ಷನಿಷ್ಠೆ ಎಳ್ಳಷ್ಟು ಕಡಿಮೆ ಆಗಲಿಲ್ಲ.

Related posts

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

August 15, 2026
ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

August 15, 2026

ಇದಲ್ಲದೆ ಸದ್ಯ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಚೈತನ್ಯ ನೀಡುವ ಚರಿಷ್ಮಾ ಡಿ.ಕೆ ಶಿವಕುಮಾರ್ ಅವರಿಗಿದೆ. ರಾಜ್ಯಾದ್ಯಂತ ಸುತ್ತಿ ಸಮರ್ಥವಾಗಿ ಪಕ್ಷ ಸಂಘಟನೆ ಮಾಡುವ ಶಕ್ತಿ. ಸಿದ್ದರಾಮಯ್ಯ ಅವರ ಹಿಡಿತದಿಂದ ಪಕ್ಷವನ್ನು ಹೊರತರುವ ಸಾಮರ್ಥ್ಯ. ಹಲವು ಬಣಗಳಾಗಿರುವ ಪಕ್ಷವನ್ನು ಒಗ್ಗೂಡಿಸಬಲ್ಲ ಚಾಣಕ್ಯತನ. ಸಂಪನ್ಮೂಲ ಮತ್ತು ವರ್ಚಸ್ವಿ ನಾಯಕ ಡಿಕೆಶಿ. ಪಕ್ಷವನ್ನು ಮುನ್ನಡೆಸಲು ಬೇಕಾದ ವರ್ಚಸ್ಸು ಮತ್ತು ಸಂಪನ್ಮೂಲ ಡಿಕೆಶಿ ಬಳಿ ಹೇರಳವಾಗಿದೆ. ಯಾವುದೇ ಸವಾಲನ್ನು ಲೀಲಾಜಾಲವಾಗಿ ಸ್ವೀಕರಿಸುವ ಡಿಕೆಶಿ ಕಷ್ಟಕಾಲದಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಶಕ್ತಿ, ಚಾಣಕ್ಷತನವಿದೆ. ಅಷ್ಟೇ ಅಲ್ಲದೇ, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಡಿಕೆಶಿಗೆ ಅಪಾರ ಪ್ರಮಾಣದ ಬೆಂಬಲಿಗರೂ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಈ ಬಂಟನಿಗೆ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ತನ್ನ ಋಣ ಸಂದಾಯದ ಭಾರವನ್ನು ಇಳಿಸಿಕೊಳ್ಳುವ ಪ್ರಯತ್ನ ಮಾಡಿಕೊಂಡಿದೆ.

Tags: aiccCongressDK Shivakumarkpcc
ShareTweetSendShare
Join us on:

Related Posts

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

by Shwetha
August 15, 2026
0

ಇಸ್ಲಾಮಾಬಾದ್: ನಮಗೆ ಯುದ್ಧ ಬೇಕಾಗಿಲ್ಲ, ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ. ಆದರೆ, ಶಾಂತಿಗಾಗಿ ನಾವು ಕೈಜೋಡಿಸುತ್ತಿರುವುದನ್ನು ಯಾರೂ ನಮ್ಮ ಬಲಹೀನತೆ ಎಂದು ಭಾವಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ...

ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

by Shwetha
August 15, 2026
0

ನವದೆಹಲಿ: ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರನ್ನು ಬಂಚ್ ಆಫ್ ಜೋಕರ್ಸ್ ಎಂದು ಜರಿದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್...

‘ಖರ್ಗೆ ಅವರಿಗೆ ಆದ ಅಪಮಾನ ದೇಶಕ್ಕೆ ಆದ ಅಪಮಾನ’: ಡಿಕೆಶಿ ಕಿಡಿ

‘ಖರ್ಗೆ ಅವರಿಗೆ ಆದ ಅಪಮಾನ ದೇಶಕ್ಕೆ ಆದ ಅಪಮಾನ’: ಡಿಕೆಶಿ ಕಿಡಿ

by Shwetha
August 15, 2026
0

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಹಿರಂಗ ಸಭೆ ನಡೆದ ಸ್ಥಳವನ್ನು ಶುದ್ಧೀಕರಣ ಮಾಡಲಾಗಿದೆ ಎನ್ನಲಾದ ಘಟನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ...

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

by Shwetha
August 15, 2026
0

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೊರಡಿಸಲಾಗಿದ್ದ ಗುಟ್ಕಾ ಮಾರಾಟ ನಿಷೇಧ ಆದೇಶವನ್ನು ತಕ್ಷಣವೇ ವಾಪಸ್ ಪಡೆಯುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ...

ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್  ಆಕ್ರೋಶ!

ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್ ಆಕ್ರೋಶ!

by Shwetha
August 15, 2026
0

ಲಕ್ನೋ: ಭಾರತದ ವಿಭಜನೆ ಮತ್ತು ಆ ಸಮಯದಲ್ಲಿ ನಡೆದ ಅತ್ಯಂತ ಭೀಕರವಾದ ರಕ್ತಪಾತಕ್ಕೆ ಕಾಂಗ್ರೆಸ್ ಪಕ್ಷದ ಅಧಿಕಾರದ ದಾಹವೇ ನೇರ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram