ಮೈಸೂರು : ಡ್ರಗ್ಸ್ ಮಾಫಿಯಾ ವಿಚಾರವಾಗಿ ಪ್ರಶಾಂತ್ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೇ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂಬ ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಬಿಜಿಪಿ ಶಾಸಕ ರಾಮದಾಸ್ ಪ್ರತಿಕ್ರಿಯಿಸಿ ವಾಚ್ ಮ್ಯಾನ್ ಆಗುತ್ತೇನೆ ಎಂದು ಆಗಲಿಲ್ಲ. ಇನ್ನೂ ಆಸ್ತಿ ಬರ್ದು ಕೊಡುತ್ತೀರಾ ಎಂದು ಕುಟುಕಿದ್ದಾರೆ.
ಜಮೀರ್ ಹೇಳಿಕೆಗೆ ಟಾಂಗ್ ನೀಡಿ ಟ್ವೀಟ್ ಮಾಡಿರುವ ರಾಮದಾಸ್, ಯಡಿಯೂರಪ್ಪನವರು ಮುಖ್ಯಮಂತ್ರಿ ಆದರೆ ಅವರ ಮನೆ ಮುಂದೆ ನಾನು ವಾಚ್ ಮ್ಯಾನ್ ಆಗುತ್ತೇನೆ ಎಂದು ಹೇಳಿ ವರ್ಷಗಳು ಉರುಳಿದವು. ಇನ್ನೂ ಅದರ ಕುರುಹು ಕಾಣುತ್ತಿಲ್ಲ. ಇನ್ನು ಸಂಜನಾ ಜೊತೆ ಕೊಲಂಬೋ ಹೋಗಿದ್ದು ಸಾಬೀತಾದರೆ ನೀವು ನಿಜಕ್ಕೂ ಆಸ್ತಿ ಬರೆದುಕೊಡುತ್ತೀರೆ ಜಮೀರ್ ಎಂದು ಪ್ರಶ್ನೆ ಮಾಡಿದ್ದಾರೆ.
ಡ್ರಗ್ ಮಾಫಿಯಾ ದಂಧೆಯಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್ ಅವರು, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ ನಾನು ನನ್ನೆಲ್ಲ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಹೇಳಿದ್ದರು.
https://youtu.be/I5BRabD3f5A








