ಮೈಸೂರು : ಡ್ರಗ್ ವಿಚಾರದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹಿಟ್ ಅಂಡ್ ರನ್ ಕೆಲಸ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯಿ ನೀಡಿದ ಆಚಾರ್, ಪ್ರಮೋದ್ ಮುತಾಲಿಕ್ ಡ್ರಗ್ಸ್ ಮಾಫಿಯಾದಲ್ಲಿ 35 ಮಂದಿ ರಾಜಕಾರಣಿಗಳು ಇದ್ದಾರೆ ಅಂತಾರೆ. ಅವರ ಹೆಸರನ್ನು ಬಿಡುಗಡೆ ಮಾಡಲಿ ಎಂದು ಕುಟುಕಿದರು.
ಮುತಾಲಿಕ್ ಬಳಿ ಪಟ್ಟಿ ಇದ್ದಿದ್ದೇ ಆದಲ್ಲಿ ಆ ಪಟ್ಟಿ ನನಗೆ ಕೊಟ್ಟರೆ ನಾನೇ ಬಿಡುಗಡೆ ಮಾಡುವೆ. ಯಾವ ಪಕ್ಷದ ರಾಜಕಾರಣಿ ತಪ್ಪು ಮಾಡಿದರು ತಪ್ಪು ತಪ್ಪೇ. ಇದರಲ್ಲಿ ಸಮರ್ಥನೆ ಬೇಡ. ಮೈಸೂರಿನ ವಿವಿಧ ಕಾಲೇಜುಗಳಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದ್ದೆ ಅಂತಾರೆ. ಅದರ ಬಗ್ಗೆಯೂ ಮಾಹಿತಿ ನೀಡಲಿ. ನನ್ನ ಜಿಲ್ಲೆಯ ಬಗ್ಗೆ ನನಗೆ ಗೊತ್ತಿದೆ. ಇಂತಹ ಹಿಟ್ ಅಂಡ್ ರನ್ ಹೇಳಿಕೆ ಕೊಡುವ ಬದಲು, ಜನ ಸೇವೆ ಮಾಡಲಿ ಎಂದು ಹೇಳಿದರು.
ಇದೇ ವೇಳೆ ಜಮೀರ್ ಬಗ್ಗೆ ಮಾತನಾಡಿ ಆಚಾರ್, ಶಾಸಕ ಜಮೀರ್ ಅಹ್ಮದ್ ಅವರ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದರೆ ವಿಚಾರಣೆ ಮಾಡಲಿ. ಯಾವ ಪಕ್ಷದ ರಾಜಕಾರಣಿ ಭಾಗಿಯಾಗಿದ್ದರು ಶಿಕ್ಷೆಯಾಗಲಿ ಎಂದರು.
https://youtu.be/eUEuO-_AiJA








