ಜಗತ್ತಿನಾದ್ಯಂತ ಶುರುವಾಗಿದೆ ಕೋವಿಡ್ ನ ಎರಡನೇ ಅಲೆ – ದೇಶಗಳಲ್ಲಿ ಜಾರಿಯಾಗುತ್ತಿದೆ ಎರಡನೇ ಲಾಕ್ ಡೌನ್
ಹೊಸದಿಲ್ಲಿ, ಸೆಪ್ಟೆಂಬರ್13: ಮತ್ತೊಮ್ಮೆ ಕೊರೋನವೈರಸ್ ಸೋಂಕಿನ ಪ್ರಮಾಣವು ಗಗನಕ್ಕೆ ಏರುತ್ತಿದ್ದು, ವಿಶ್ವದಾದ್ಯಂತ ಹಲವಾರು ದೇಶಗಳು ಎರಡನೇ ಲಾಕ್‌ಡೌನ್ ವಿಧಿಸಲು ನಿರ್ಧಾರವನ್ನು ಕೈಗೊಂಡಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳ ತೀವ್ರ ಏರಿಕೆಯ ನಡುವೆಯೂ ಅನ್ ಲಾಕ್‌ನಿಂದ ಬಹುತೇಕ ಚಟುವಟಿಕೆ ಚುರುಕಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದು, ಇಲ್ಲದೇ ಹೋದರೆ ಹೊರದೇಶಗಳಂತೆ ಭಾರತದಲ್ಲಿ ಕೂಡ ಎರಡನೇ ಲಾಕ್‌ಡೌನ್ ಹೇರುವ ಸಾಧ್ಯತೆಯಿದೆ.
ಯಾವ ಯಾವ ದೇಶದಲ್ಲಿ 2 ನೇ ಲಾಕ್ ಡೌನ್ ಜಾರಿಯಲ್ಲಿದೆ
1 ಇಸ್ರೇಲ್ : ಇಸ್ರೇಲ್‌ನಲ್ಲಿ ಎರಡನೇ ಲಾಕ್ ಡೌನ್ ಜಾರಿಯಲ್ಲಿದೆ ಮತ್ತು ಎರಡನೇ ಲಾಕ್ ಡೌನ್ ಜಾರಿ ಮಾಡಿದ ಮೊದಲ ದೇಶವಾಗಿದೆ. ಇಸ್ರೇಲ್ ನಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಶಾಲಾ-ಕಾಲೇಜು ಮುಚ್ಚಿದೆ.
2 ಜಕಾರ್ತಾ: ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗಿದ್ದು, ವೈದ್ಯಕೀಯ ವ್ಯವಸ್ಥೆಯೇ ಕುಸಿಯುವ ಭೀತಿ ಎದುರಾಗಿದೆ. ರಾಜಧಾನಿ ಇಂಡೋನೇಷ್ಯಾ ದಲ್ಲಿ ಸೆಪ್ಟೆಂಬರ್ 14ರಿಂದ ಎರಡನೇ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.
3 ಬ್ರಿಟನ್: ಬ್ರಿಟನ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಠಿಣ ಕ್ರಮ ಜಾರಿಯಲ್ಲಿದೆ. ಈ ಮೊದಲು 30 ಜನರಿಗೆ ಸೇರಲು ನೀಡಿದ್ದ ಅನುಮತಿಗೆ ನಿರ್ಬಂಧ ಹೇರಲಾಗಿದ್ದು, ಕೇವಲ 6 ಜನರಿಗೆ ಮಾತ್ರ ಸೇರಲು ಅವಕಾಶ ನೀಡಲಾಗಿದೆ. ಪಬ್, ರೆಸ್ಟೋರೆಂಟ್ ಗಳನ್ನು ರಾತ್ರಿ 10ಕ್ಕೆ ಬಂದ್ ಮಾಡಲು ಸೂಚಿಸಲಾಗಿದೆ.
4 ಆಸ್ಟ್ರೇಲಿಯಾ : ಆಸೀಸ್ ನಲ್ಲಿ ಭಾಗಶಃ ಲಾಕ್ ಡೌನ್ ವಿಧಿಸಲಾಗಿದೆ. ಆಸೀಸ್ ನಲ್ಲಿ ಕೊರೋನಾ ಸೋಂಕು ಹೆಚ್ಚಿರುವಲ್ಲಿ ಎರಡನೇ ಲಾಕ್’ಡೌನ್ ಹೇರಲಾಗಿದೆ. ಆಸೀಸ್ ನ 2ನೇ ಅತಿದೊಡ್ಡ ರಾಜ್ಯವಾದ ವಿಕ್ಟೋರಿಯಾದಲ್ಲಿ ಸೆಪ್ಟೆಂಬರ್.28ರವರೆಗೆ ಲಾಕ್‌ಡೌನ್ ಹೇರಲಾಗಿದೆ.
5 ಐರ್ಲೆಂಡ್ : ಐರ್ಲೆಂಡ್ ನಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಿರುವ ಕಾರಣ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಲು ಅಲ್ಲಿನ ಸರ್ಕಾರ ಸಿದ್ಧತೆ ನಡೆಸಿದೆ.
6 ಫಿಲಿಪ್ಪಿನ್ಸ್, ಟರ್ಕಿ: ಈ ದೇಶಗಳಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಬೆಲ್ಜಿಯಂನಿಂದ ಬರುವ ನೌಕರರಿಗೆ ಐರೋಪ್ಯ ಸಂಸತ್ತು ಕ್ವಾರಂಟೈನ್ ಘೋಷಿಸಿದೆ
7 ಫ್ರಾನ್ಸ್: ಫ್ರಾನ್ಸ್ ನಲ್ಲಿ ಕೊರೋನಾ ಸೋಂಕು ಮರುಕಳಿಸಿದ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಬಾರಲ್ಲಿ ಕೆಲವೇ ಜನರಿಗೆ ಅವಕಾಶ ನೀಡಲಾಗಿದ್ದು, ಬಹಿರಂಗ ಧೂಮಪಾನ ನಿಷೇಧಿಸಿದೆ.
8 ಸ್ಪೇನ್ : ಸ್ಪೇನ್ ನ ಗಾಲ್ಸಿಯಾ ಪ್ರಾಂತ್ಯದಲ್ಲಿ ಜುಲೈ ಅಂತ್ಯದಿಂದಲೇ 2ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಜನರಿಗೆ ಹೋಂ-ಕ್ವಾರೆಂಟೈನ್ ಕಡ್ಡಾಯವಾಗಿದ್ದು, ಸಿಬ್ಬಂದಿಗಳಿಗೆ ಮಾತ್ರ ಕಚೇರಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.








