ನವದೆಹಲಿಯ ಬಿಜೆಪಿ ಸಂಸದ ಮೀನಾಕ್ಷಿ ಲೆಖಿ ಬುಧವಾರ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ದೆಹಲಿ ಗಲಭೆಗೆ ಪ್ರಚೋದಿಸಿದ್ದಾರೆ ಎಂದು ದೂಷಿಸಿದವರ ಮೇಲೆ ವಾಗ್ದಾಳಿ ನಡೆಸಿದರು.
ಅಮಾನತುಲ್ಲಾ ಖಾನ್, ಶರ್ಜೀಲ್ ಇಮಾಮ್ ಮತ್ತು ತಾಹೀರ್ ಹುಸೇನ್ ಅವರ ಕೃತ್ಯಗಳಿಗಾಗಿ ಕಪಿಲ್ ಮಿಶ್ರಾ ಅವರನ್ನು ಹೊಣೆಯಾಗಿಸಲಾಯಿತು. ಒಂದು ಸಮುದಾಯ ವರ್ಗವನ್ನು ಸಮಾಧಾನ ಪಡಿಸಲು ಕಪಿಲ್ ಮಿಶ್ರಾ ಅವರನ್ನು ದೂಷಿಸಲಾಯಿತೆಂದ ಲೆಖಿ ಕಾಂಗ್ರೆಸ್ ಪಕ್ಷದ ಹೆಸರನ್ನು ಉಲ್ಲೇಖಿಸದೆ, ದೆಹಲಿ ಗಲಭೆಗೆ ಹಳೇ ಬೃಹತ್ ಪಕ್ಷ ಕಾರಣವಾಗಿರುವಾಗ ನೀವು ಕಪಿಲ್ ಮಿಶ್ರಾ ಅವರನ್ನು ಎಷ್ಟು ವಿಷಯಗಳಿಗೆ ದೂಷಿಸುತ್ತೀರಿ ಎಂದು ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಪ್ರಶ್ನಿಸಿದರು.
ದೆಹಲಿ ಹಿಂಸಾಚಾರವು ಸಿಎಎ ವಿರುದ್ಧದ ಪ್ರತಿಭಟನೆಯಿಂದ ಪ್ರಾರಂಭವಾಯಿತು ಎಂದು ತಮ್ಮ ಮಾತನ್ನು ಮುಂದುವರಿಸಿದ ಲೆಖಿ, ಕೆಲವು ಜೆಎನ್‌ಯು ವಿದ್ಯಾರ್ಥಿಗಳು ಮೊದಲು ಸಿಎಎಯನ್ನು ವಿರೋಧಿಸಿದರು ನಂತರ ಈ ವಿಷಯವು ಜಾಮಿಯಾಕ್ಕೆ ಸ್ಥಳಾಂತರಗೊಂಡಿತು ಮತ್ತು ಪೊಲೀಸರು ಕ್ರಮ ಕೈಗೊಂಡಾಗ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಲಾಯಿತು.ಆದರೆ ನಮ್ಮ ಸರ್ಕಾರ 36 ಗಂಟೆಗಳಲ್ಲಿ ಗಲಭೆಯನ್ನು ನಿಯಂತ್ರಿಸಿದೆ ಎಂದು ಅವರು ಹೇಳಿದರು.








