ಹುಬ್ಬಳ್ಳಿ: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹುಬ್ಬಳ್ಳಿಯ ಕಾಂಗ್ರೆಸ್ ಮಖಂಡ ಗಿರೀಶ್ ಗದಿಗೆಪ್ಪಗೌಡರ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನಟಿ ರಾಗಿಣಿ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಜತೆಗೆ ಈತ ಕಾಂಗ್ರೆಸ್ ಮಾಜಿ ಸಚಿವರೊಬ್ಬರ ಆಪ್ತ ಎನ್ನಲಾಗಿದೆ.
ರಾಗಿಣಿ ಮೊಬೈಲ್‍ನಲ್ಲಿ ದೊರೆತ ಗಿರೀಶ್ ಭಾವಚಿತ್ರ ಚಿತ್ರ ಆಧರಿಸಿ ವಿಚಾರಣೆ ನಡೆಸಲಾಗುತ್ತಿದೆ. ನಟಿ ರಾಗಿಣಿ ಜತೆ ಗೋವಾ ತೆರಳಿದ್ದ ಫೆÇೀಟೊಗಳನ್ನು ಗಿರೀಶ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಉಣಕಲ್‍ನಲ್ಲಿರುವ ಗಿರೀಶ್ ಮನೆಯಲ್ಲೂ ಸಿಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.







