ಸ್ಪಿನ್ ಡಾಕ್ಟರ್ ಶೇನ್ ವಾರ್ನ್ ರಾಯಲ್ಸ್ ತಂಡದ ಮೆಂಟರ್..!
ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಮಾಜಿ ಕೋಚ್ ಕಮ್ ನಾಯಕ ಶೇನ್ ವಾರ್ನ್ ಅವರು ಮತ್ತೆ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಶೇನ್ ವಾರ್ನ್ ಅವರು ರಾಯಲ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ.
2008ರ ಮೊದಲ ಐಪಿಎಲ್ ನಲ್ಲಿ ಶೇನ್ ವಾರ್ನ್ ಅವರು ರಾಜಸ್ತಾನ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ತಂಡದ ಮೆಂಟರ್ ಆಗಿದ್ದು, ಕೋಚ್ ಆಂಡ್ರ್ಯೂ ಮೆಕ್ ಡೊನಾಲ್ಡ್ ಜೊತೆ ಕಾರ್ಯ ನಿರ್ವಹಿಸಲಿದ್ದಾರೆ. ಮೆಕ್ ಡೊನಾಲ್ಡ್ ಮತ್ತು ಶೇನ್ ವಾರ್ನ್ ಅವರು 2003ರಿಂದ 2007ರ ವರೆಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ತಂಡದ ಪರ ಜೊತೆಯಾಗಿ ಆಡಿದ್ದರು.
https://youtu.be/BH8knlOnbKs?t=3
ರಾಜಸ್ತಾನ ರಾಯಲ್ಸ್ ನನ್ನ ತಂಡ. ನನ್ನ ಕುಟುಂಬ. ರಾಯಲ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದು ಸಂತಸವನ್ನು ತಂದಿದೆ. ಮೆಕ್ ಡೊನಾಲ್ಡ್ ಮತ್ತು ಝುಬಿನ್ ಭರೂಚಾ ಜೊತೆಗೂಡಿ ತಂಡವನ್ನು ಉನ್ನತ ಮಟ್ಟಕ್ಕೇರಿಸುವ ಗುರಿಯನ್ನು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಯಶ ಸಾಧಿಸುವ ವಿಶ್ವಾಸವನ್ನು ಶೇನ್ ವಾರ್ನ್ ವ್ಯಕ್ತಪಡಿಸಿದ್ದಾರೆ.
ರಾಜಸ್ತಾನ ರಾಯಲ್ಸ್ ತಂಡ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಇದೀಗ ತಂಡದ ರಾಯಭಾರಿಯ ಜೊತೆಗೆ ಮೆಂಟರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ತಂಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ತರವಾದ ಜವಾಬ್ದಾರಿ ಕೂಡ ಅವರ ಮೇಲಿದೆ.








