ADVERTISEMENT
Tuesday, September 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಟಾಪ್ -5 ಬ್ಯಾಟ್ಸ್ ಮೆನ್ ಗಳು ಯಾರ್ಯಾರು ?

admin by admin
September 14, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಟಾಪ್ -5 ಬ್ಯಾಟ್ಸ್ ಮೆನ್ ಗಳು ಯಾರ್ಯಾರು ?

ಐಪಿಎಲ್ ಆಗಲಿ ಟಿ-ಟ್ವೆಂಟಿ ಕ್ರಿಕೆಟ್ ಆಗಲಿ.. ಅದು ಹೊಡಿಬಡಿ ಆಟ. ಇಲ್ಲಿ ಕ್ರಿಕೆಟ್ ನ ಗ್ರಾಮರ್ ಗಳು ಲೆಕ್ಕಕ್ಕಿಲ್ಲ. ಹೇಗೆ ಆಡುತ್ತೇವೆ ಅನ್ನೋದು ಮುಖ್ಯವಲ್ಲ. ರನ್ ಗಳು ನೀರಿನಂತೆ ಹರಿದು ಬರಬೇಕು. ಹಾಗಾಗಿಯೇ ಐಪಿಎಲ್ ನಲ್ಲಿ ಚಿತ್ರ ವಿಚಿತ್ರ ಶೈಲಿಯ ಹೊಡೆತಗಳನ್ನು ನೋಡಬಹುದಾಗಿದೆ. ಕೆಲವೊಂದು ಬಾರಿ ಐಪಿಎಲ್ ಪಂದ್ಯಗಳನ್ನು ನೋಡಿದಾಗ ಗಲ್ಲಿ ಕ್ರಿಕೆಟ್ ಕೂಡ ನೆನಪಾಗಿಬಿಡುತ್ತೆ.
ಹಾಗಂತ ಐಪಿಎಲ್ ನಲ್ಲಿ ಮನಸ್ಸಿಗೆ ಬಂದ ಹಾಗೇ ಆಡುವಂತಿಲ್ಲ. ಸಂಯಮ, ತಾಳ್ಮೆ, ಜವಾಬ್ದಾರಿ, ಪ್ಲಾನ್ ಮಾಡಿಕೊಂಡು ಆಡಬೇಕಾಗುತ್ತೆ. ಹಾಗೇ ಸ್ಥಿರ ಪ್ರದರ್ಶನವನ್ನು ನೀಡಬೇಕಾಗುತ್ತೆ. ಕಳೆದ 12 ವರ್ಷಗಳಲ್ಲಿ ಐಪಿಎಲ್ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ಬ್ಯಾಟ್ಸ್ ಮೆನ್ ಗಳು ಬ್ಯಾಟ್ ಬೀಸಿದ್ದಾರೆ. ಆದ್ರೆ ಇಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದವರ ಸಂಖ್ಯೆ ತೀರಾ ಕಮ್ಮಿ ಇದೆ. ಆದ್ರೂ ಕೂಡ ಕಳೆದ 12 ವರ್ಷಗಳಲ್ಲಿ ಸರಾಸರಿಗೆ ತಕ್ಕಂತೆ ಸ್ಥಿರ ಬ್ಯಾಟಿಂಗ್ ನೀಡಿರುವ ಟಾಪ್ -5 ಬ್ಯಾಟ್ಸ್ ಮೆನ್ ಗಳಲ್ಲಿ ಇಬ್ಬರು ಭಾರತೀಯ ಬ್ಯಾಟ್ಸ್ ಮೆನ್ ಗಳಿದ್ದಾರೆ. ಅಚ್ಚರಿಯಂದ್ರೆ ಇಬ್ಬರು ಕೂಡ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗಳು. ಇನ್ನುಳಿದ ಮೂವರು ವಿದೇಶಿ ಆಟಗಾರರು.

Related posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

September 29, 2026
ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

September 29, 2026

ಶಾನ್ ಮಾರ್ಶ್, ಡೇವಿಡ್ ವಾರ್ನರ್, ರಿಷಬ್ ಪಂತ್, ಮಹೇಂದ್ರ ಸಿಂಗ್ ಧೋನಿ ಮತ್ತು ಸ್ಟೀವನ್ ಸ್ಮಿತ್ ಅವರು ಟಾಪ್ -5 ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಐದು ಬ್ಯಾಟ್ಸ್ ಮೆನ್ ಗಳ ಅಂಕಿ ಅಂಶಗಳ ಪ್ರಕಾರವೇ ಅವರಿಗೆ ರೇಟಿಂಗ್ ಗಳನ್ನು ನೀಡಲಾಗಿದೆ.

ಟಾಪ್ -1 ಶಾನ್ ಮಾರ್ಶ್
ಶಾನ್ ಮಾರ್ಶ್ ಅವರು 2008ರಲ್ಲಿ ಐಪಿಎಲ್ ಆಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು. ಆಡಿರುವ ಇನಿಂಗ್ಸ್ ಗಳು – 69, ದಾಖಲಿಸಿರುವ ರನ್ ಗಳು – 2477, ಸರಾಸರಿ – 40, ಸ್ಟ್ರೈಕ್ ರೇಟ್ -132.7, ಸ್ಥಿರ ಪ್ರದರ್ಶನ – 56.5%. ಶಾನ್ ಮಾರ್ಶ್ ಅವರು 2008ರ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು.

ಟಾಪ್ -2 ಡೇವಿಡ್ ವಾರ್ನರ್
ಸದ್ಯ ಸನ್ ರೈಸರ್ಸ್ ಹೈದ್ರಬಾದ್ ತಂಡದ ನಾಯಕ. ಐಪಿಎಲ್ ನಲ್ಲಿ ಒಟ್ಟು ಆಡಿರುವ ಪಂದ್ಯಗಳು – 126, ದಾಖಲಿಸಿರುವ ರನ್ ಗಳು – 4706, ಸರಾಸರಿ =43.2, ಸ್ಟ್ರೈಕ್ ರೇಟ್ – 142.4. ಸ್ಥಿರ ಪ್ರದರ್ಶನ – 54%
2009ರ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಅವರು ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಪರ ಆಡಿದ್ದರು. ಬಳಿಕ 2014ರಿಂದ ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡುತ್ತಿದ್ದಾರೆ. ಮೊದಲ ಆರು ಆವೃತ್ತಿಗಳಲ್ಲಿ ವಾರ್ನರ್ ಡಿಡಿ ಪರ 55 ಇನಿಂಗ್ಸ್ ಗಳನ್ನು ಆಡಿದ್ದು ದಾಖಲಿಸಿದ್ದ ರನ್ ಗಳು 1435.
ಬಳಿಕ ಹೈದ್ರಬಾದ್ ಸನ್ ರೈಸರ್ಸ್ ತಂಡದ ಪರ 71 ಇನಿಂಗ್ಸ್ ಗಳಲ್ಲಿ 3271 ರನ್ ಗಳಿಸಿದ್ದಾರೆ. ಮೂರು ಬಾರಿ ಆರೆಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ.

ಟಾಪ್ -3 ರಿಷಬ್ ಪಂತ್
ರಿಷಬ್ ಪಂತ್.. ಟಾಪ್ -3 ಅಂದಾಗ ಅಚ್ಚರಿಯಾಗಬಹುದು. ಟೀಮ್ ಇಂಡಿಯಾದಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ರಿಷಬ್ ಪಂತ್, ಕಳೆದ ನಾಲ್ಕು ವರ್ಷಗಳಿಂದ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. 2017ರ ಐಪಿಎಲ್ ಬಳಿಕ ರಿಷಬ್ ಪಂತ್ ಮುಂಚೂಣಿಗೆ ಬಂದಿದ್ದಾರೆ.
ರಿಷಬ್ ಪಂತ್ ಆಡಿರುವ ಇನಿಂಗ್ಸ್ ಗಳು 54, ದಾಖಲಿಸಿರುವ ರನ್ ಗಳು 1736, ಸರಾಸರಿ 36.2, ಸ್ಟ್ರೈಕ್ ರೇಟ್ 162.7, ಸ್ಥಿರ ಪ್ರದರ್ಶನ -52.8%
ಕಳೆದ ಮೂರು ವರ್ಷಗಳ ಐಪಿಎಲ್ ಟೂರ್ನಿಗಳಲ್ಲಿ ರಿಷಬ್ ಪಂತ್ ಗರಿಷ್ಠ ರನ್ ದಾಖಲಿಸಿದ್ದ ಆಟಗಾರನಾಗಿದ್ದಾರೆ. ಒಟ್ಟು 1534 ರನ್ ಗಳಿಸಿದ್ದಾರೆ. 2018ರ ಐಪಿಎಲ್ ನಲ್ಲಿ ಪಂತ್ ರನ್ ಗಳ ಸುರಿಮಳೆಗೈದಿದ್ದಾರೆ. ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಅಜೇಯ 128 ರನ್ ಸಿಡಿಸಿದ್ದಾರೆ.

https://youtu.be/BH8knlOnbKs?t=2

ಟಾಪ್ -4 ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ.. ಕೂಲ್ ಕ್ಯಾಪ್ಟನ್.. ಬೆಸ್ಟ್ ಫಿನೀಶರ್. ಐಪಿಎಲ್ ಟೂರ್ನಿಯಲ್ಲಿ ಸಿಎಸ್‍ಕೆ ತಂಡದ ನಾಯಕ (ಎರಡು ಬಾರಿ ಆರ್‍ಪಿಎಸ್) ಹೊರತುಪಡಿಸಿ), ಮೂರು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಸಾಧನೆ ಧೋನಿ ಮೇಲಿದೆ.
ಧೋನಿ ಒಟ್ಟು ಆಡಿರುವ ಇನಿಂಗ್ಸ್ ಗಳು -170, ದಾಖಲಿಸಿರುವ ರನ್ ಗಳು – 4432, ಸರಾಸರಿ 42.2, ಸ್ಟ್ರೈಕ್ ರೇಟ್ – 137.9, ಸ್ಥಿರ ಪ್ರದರ್ಶನ -51.6%. 65 ಬಾರಿ ನಾಟೌಟ್ ಆಗಿ ಉಳಿದಿದ್ದಾರೆ. ಇನ್ನು ಗರಿಷ್ಠ ಸಿಕ್ಸರ್ ಸಿಡಿಸಿದ್ದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಟಾಪ್-5- ಸ್ಟೀವನ್ ಸ್ಮಿತ್
ವಿಶ್ವ ಕ್ರಿಕೆಟ್ ನ ಅಪ್ರತಿಮ ಕ್ರಿಕೆಟಿಗ ಸ್ಟೀವನ್ ಸ್ಮಿತ್. ಬಾಲ್ ಟೆಂಪರಿಂಗ್ ವಿಚಾರದಲ್ಲಿ ಒಂದು ವರ್ಷ ನಿಷೇಧ ಅನುಭವಿಸಿದ್ದರು. 2012ರಿಂದ ಸ್ಟೀವನ್ ಸ್ಮಿತ್ ಐಪಿಎಲ್ ಆಡುತ್ತಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್, ಆರ್‍ಪಿಎಸ್ ಪರ ಆಡಿದ್ದು, ಸದ್ಯ ರಾಜಸ್ತಾನ ರಾಯಲ್ಸ್ ತಂಡದ ನಾಯಕ. ಸ್ಟೀವನ್ ಸ್ಮಿತ್ ಆಡಿರುವ ಇನಿಂಗ್ಸ್ ಗಳು -72, ದಾಖಲಿಸಿರುವ ರನ್ ಗಳು – 2022, ಸರಾಸರಿ – 37.4, ಸ್ಟ್ರೈಕ್ ರೇಟ್ – 128.9, ಸ್ಥಿರ ಪ್ರದರ್ಶನ – 50.7%.
ಇನ್ನು ಟೀಮ್ ಇಂಡಿಯಾ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಿರ ಪ್ರದರ್ಶನಲ್ಲಿ 50.3% ಹೊಂದಿದ್ದು ಟಾಪ್ ಸಿಕ್ಸ್ ನಲ್ಲಿದ್ದಾರೆ. ಅದೇ ರೀತಿ ಸ್ಥಿರ ಪ್ರದರ್ಶನದಲ್ಲಿ 50% ಹೊಂದಿರುವ ಜೆಪಿ ಡುಮಿನಿ ಏಳನೇ ಸ್ಥಾನದಲ್ಲಿದ್ದಾರೆ.

Tags: #David Warner.#IPL 2020 news#IPL 2020 UAE: Top 5 Most Consistent Batsmen#rishab pant#Shaun Marsh#Steve Smithcskdelhi capitalskings 11 punjabMahendra Singh Dhonirajasthan royalsSunRisers Hyderabad
ShareTweetSendShare
Join us on:

Related Posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

by Shwetha
September 29, 2026
0

ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ...

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

by Shwetha
September 29, 2026
0

ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

by Shwetha
September 29, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ...

ಬಿಜೆಪಿ ಜತೆ ರಾಜಿಯಾಗಿದ್ದರೆ ಡಿಕೆಶಿ ಇವತ್ತು ಬೇರೆ ಲೆವೆಲ್ ನಲ್ಲೇ ಇರುತ್ತಿದ್ದರು: ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದ ಬಾಲಕೃಷ್ಣ

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಬಗ್ಗೆ ಸಚಿವರ ಹೇಳಿಕೆ: ಸರ್ಕಾರದೊಳಗೂ ಚರ್ಚೆ

by Shwetha
September 29, 2026
0

ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮದ ಕುರಿತು ರಾಜ್ಯ ಸರ್ಕಾರದೊಳಗೇ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಸರ್ಕಾರದ...

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

by Shwetha
September 29, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಕುರಿತು ಕೊನೆಗೂ ಸರ್ಕಾರ ಮೌನ ಮುರಿದಿದೆ. ಇದುವರೆಗೂ ವಿರೋಧ ಪಕ್ಷಗಳು ಮಾಡುತ್ತಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram