ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನ್ಯೂಸ್ HOUR @ 5 PM

admin by admin
September 14, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ತ್ರಿಬಲ್ ಪ್ರಕರಣ : ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್

ಮಂಡ್ಯದ ತ್ರಿಬಲ್ ಅರ್ಚಕರ ಮರ್ಡರ್ ಪ್ರಕರಣ ಸಂಬಂಧ ಆರೋಪಿಗಳ ಪತ್ತೆ ಕಾರ್ಯದ ವೇಳೆ ಪೊಲೀಸರ ಮೇಲೆ ಆರೋಪಿಗಳು ದಾಳಿಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಗಳ ಮೇಲೆ ಪ್ರತಿ ದಾಳಿ ನಡೆಸಿದ್ದು, ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮೂರ್ನಾಲ್ಕು ಪೊಲೀಸರಿಗೂ ಗಾಯಗಳಾಗಿದ್ದು, ಗಾಯಗೊಂಡಿದ್ದ PSI ಶರತ್ ಕುಮಾರ್, ASI ಕೃಷ್ಣಕುಮಾರ್, ಹೆಡ್ ಕಾನ್ಸ್‌ಟೇಬಲ್  ಅನಿಲ್  ಅವರಿಗೆ ವಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ ಸಿ. ಟಿ ರವಿ

ಮಂಡ್ಯ ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಪೊಲೀಸರ ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಚಿವ ಸಿ.ಟಿ.ರವಿ ಅವರು ಭೇಟಿ ನೀಡಿದ್ರು. ಸಚಿವರು ಪೊಲೀಸರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದಾರೆ.

ಜಪಾನ್ ಪ್ರಧಾನಿಯಾಗಿ  ಸುಗ ಆಯ್ಕೆ  ಫೈನಲ್..?

ಜಪಾನ್‍ನ ಮುಂದಿನ ಪ್ರಧಾನಮಂತ್ರಿಯಾಗಿ ಆಡಳಿತಾರೂಢ ಲಿಬೆರಲ್ ಡೆಮೊಕ್ರಾಟಿಕ್ ಪಾರ್ಟಿಯ ಹಿರಿಯ ನಾಯಕ ಯೊಶಿಹಿಡೆ ಸುಗ ಆಯ್ಕೆಯಾಗುವುದು ಪಕ್ಕಾ ಆಗಿದೆ.

ಎಲ್‍ಡಿಪಿಯ ಹೊಸ ಮುಖ್ಯಸ್ಥರಾಗಿ ಸುಗ ಆವರು ಇಂದು ಆಯ್ಕೆಯಾಗಿದ್ದಾರೆ. ಇದರೊಂದಿಗೆ ದೇಶದ ಮುಂದಿನ ಪ್ರಧಾನಮಂತ್ರಿಗಾಗಿ ಬುಧವಾರ ನಡೆಯುವ ಸಂಸತ್ ಚುನಾವಣೆಯಲ್ಲಿ ಇವರು ಜಯಸುವುದು ನಿಶ್ಚಿತವಾಗಿದೆ ಎನ್ನಲಾಗಿದೆ.

ಡ್ರಗ್ ಪೆಡ್ಲರ್ ಜೊತೆಗೆ ಆರ್ ಅಶೋಕ್ ಫೋಟೋ ವೈರಲ್

ಡ್ರಗ್ ಡೀಲರ್ ರಾಹುಲ್ ಜೊತೆ ಕಂದಾಯ ಸಚಿವ ಆರ್.ಅಶೋಕ್ ಅವರು ಇರುವ ಫೋಟೋವೊಂದು ವೈರಲ್ ಆಗುತ್ತಿದೆ. ರಾಹುಲ್ ನನ್ನು ಸಿಸಿಬಿ ಪೊಲೀಸರು ಸೆಪ್ಟಂಬರ್ 3ರಂದು ಬಂಧಿಸಿದ್ದರು. ಈ ಪ್ರಕರಣ ಈಗ ಬಗೆದಷ್ಟು ಬಯಲಾಗುತ್ತಿದ್ದು, ಈತನಿಗೆ ಸ್ಯಾಂಡಲ್ ವುಡ್ ನ ಬಹುತೇಕ ನಟ-ನಟಿಯರ ಜೊತೆಗೆ ನಂಟಿರುವುದು ಬಟಾಬಯಲಾಗಿದೆ. ರಾಹುಲ್ ಜೊತೆಗೆ ಸಚಿವ ಆರ್ ಅಶೋಕ್ ಅವರ ಫೋಟೋ ಕೂಡ ವೈರಲ್ ಆಗಿದ್ದು, ಈ ಫೋಟೋದಲ್ಲಿ ರಾಹುಲ್ ಗೆ ಅಶೋಕ್ ಕೇಕ್ ತಿನ್ನಿಸುತ್ತಿದ್ದಾರೆ.

‘ನಂಗೆ ಹಿಂದಿ ಗೊತ್ತಿಲ್ಲ’: ತಮ್ಮ ಹೆಮ್ಮೆ ಮಾತೃಭಾಷೆ ಕನ್ನಡ ಎಂದ ನಟರು..!

ಸೆಪ್ಟೆಂಬರ್ 14 ರಂದು ಹಿಂದಿ ದಿಸವ್ ಆಚರಣೆ ಮಾಡಲಾಗುತ್ತಿದೆ. ಆದ್ರೆ ಹಿಂದಿ ದಿವಸ್ ಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.  ಇದೀಗ ಸ್ಯಾಂಡಲ್ ವುಡ್ ನಟರಾದ ಪ್ರಕಾಶ್ ರಾಜ್, ಡಾಲಿ ಧನಂಜಯ್,  ಆದಿನಗಳು ಚೇತನ್ ಸಹ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. “ಹಿಂದಿ ಗೊತ್ತಿಲ್ಲ “ ಎಂಬ ಕನ್ನಡ ವ್ಯಾಕ್ಯವಿರುವ ಟಿ – ಶರ್ಟ್ ಧರಿಸಿ ಟ್ವೀಟ್ ಮಾಡಿ ಹಿಂದಿ ಹೇರಿಕೆ ಖಂಡಿಸಿದ್ದಾರೆ

ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ “ರಿಯಲ್ ಸ್ಟಾರ್”

ಮತ್ತೆ ನಿರ್ದೇಶನ ಮಾಡುವ ಬಗ್ಗೆ ರಿಯಲ್ ಉಪೇಂದ್ರ ಅವರೇ ಖುದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಇದೇ ತಿಂಗಳ 18ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಈ ಬಾರಿ ಹುಟ್ಟುಹಬ್ಬದ ಆಚರಣೆ ಇರಲ್ಲ, ಯಾರು ಮನೆಯ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ರಿಯಲ್ “ಬುದ್ಧಿವಂತ” ಮನವಿ ಮಾಡಿಕೊಂಡಿದ್ದಾರೆ.

ರಾಗಿಣಿಗಿಲ್ಲ ಜಾಮೀನು ಬಾಗ್ಯ..!

ಡ್ರಗ್ಸ್ ಮಾಫಿಯಾ ಜಾಲದೊಂದಿಗೆ ನಂಟಿರುವ ಆರೋಪದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ನಟಿ ರಾಗಿಣಿಗೆ ಇಂದು ಕೂಡ ಜಾಮೀನು ಭಾಗ್ಯವಿಲ್ಲ. ಸರ್ಕಾರಿ ವಕೀಲರು ಜಾಮೀನು ಅರ್ಜಿಯ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೇಳಿದ ಕಾರಣ ವಿಶೇಷ ಕೋರ್ಟ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷ್ಟೆಂಬರ್ 16ಕ್ಕೆ ಮುಂದೂಡಿದೆ.

92,071 ಮಂದಿಗೆ ಸೋಂಕು

ದೇಶದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಒಂದೇ ದಿನ ಬರೋಬ್ಬರಿ 92,071 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 48,46,428ಕ್ಕೆ ತಲುಪಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 1,136 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖಅಯೆ ಕೂಡ 79,772ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಗಡಿಯಲ್ಲಿ ಉದ್ವಿಗ್ನ

ವಿದೇಶಾಂಗ ಸಚಿವ ಜೈಶಂಕರ್, ಚೀನಾದ ವಿದೇಶಾಂಗ ಸಚಿವರೊಡನೆ ಮಾಸ್ಕೋದಲ್ಲಿ ನಡೆಸಿದ ಸಂವಾದದ ನಂತರವೂ ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಲಡಾಖ್ನ ರೆಜಾಗ್ ಲಾ ಬಳಿಯ ಮುಖ್ಪಾರಿ ಶಿಖರದಲ್ಲಿ ಶೂಟಿಂಗ್ ವ್ಯಾಪ್ತಿಯ ಅಂತರದಲ್ಲಿ ಭಾರತ-ಚೀನಾ ಪಡೆಗಳು ಪರಸ್ಪರ ಕಾವಲು ಕಾಯುವುದನ್ನು ಮುಂದುವರಿಸಿದೆ. ಅದೇ ಸಮಯದಲ್ಲಿ, ಚೀನಾ ಪೂರ್ವ ಲಡಾಖ್ನ ಪಂಗೊಂಗ್ ತ್ಸೊದ ದಕ್ಷಿಣ ಭಾಗದಲ್ಲಿರುವ ಸ್ಪ್ಯಾಂಗೂರ್ ಗ್ಯಾಪ್ನಲ್ಲಿ ಭಾರತೀಯ ಸೇನೆಯ ನಿಯೋಜನೆಯ ರೈಫಲ್ ವ್ಯಾಪ್ತಿಯಲ್ಲಿ ಸಾವಿರಾರು ಸೈನಿಕರು, ಟ್ಯಾಂಕ್ಗಳು ಮತ್ತು ಹೊವಿಟ್ಜರ್ಗಳನ್ನು ಸಜ್ಜುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನವಿಲುಗಳ ಜೊತೆ ಬ್ಯುಸಿ

ಪ್ರಧಾನಿಯವರು ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ, ಹೀಗಾಗಿ ದೇಶದ ಜನರು ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಬೇಕು, ನಿಮ್ಮ ಜಾಗ್ರತೆಯಲ್ಲಿ ನೀವಿರಿ ಎಂದು ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯವರ ಕಾಲೆಳೆದಿದ್ದಾರೆ. ಈ ವಾರ ಭಾರತದಲ್ಲಿ ಕೋವಿಡ್-19 ಪ್ರಕರಣಗಳು 50 ಲಕ್ಷ ಗಡಿ ದಾಟಬಹುದು. ಸಕ್ರಿಯ ಕೇಸುಗಳೇ 10 ಲಕ್ಷವಾಗಬಹುದು. ಒಬ್ಬ ಮನುಷ್ಯನ ಅಹಂಕಾರದ ಕೊಡುಗೆಯೇ ಸರಿಯಾದ ಯೋಜನೆ ಹಾಕಿಕೊಳ್ಳದೆ ಲಾಕ್ ಡೌನ್ ಹೇರಿಕೆ ಮಾಡಿದ್ದು, ಇದರಿಂದ ದೇಶದೆಲ್ಲೆಡೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಡಾಮಿನಿಕ್ ಥೀಮ್ಗೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ..!

ಆಸ್ಟ್ರೀಯದ ಡಾಮಿನಿಕ್ ಥೀಮ್ ಅವರು ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಡಾಮಿನಿಕ್ ಥೀಮ್ ಅವರು ಅದ್ಭುತ ಆಟವನ್ನಾಡಿ ಅರ್ಹವಾಗಿಯೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಜಿದ್ದಾ ಜಿದ್ದಿನ ಫೈನಲ್ ಪಂದ್ಯದಲ್ಲಿ ಡಾಮಿನಿಕ್ ಥೀಮ್ ಅವರು ಜರ್ಮನಿಯ ಅಲೆಕ್ಸಾಂಡರ್ ಝಿವೆರೆವ್ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ರು.

ಇಂಗ್ಲೆಂಡ್ ಗೆ ಜಯ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 24 ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 231 ರನ್ ಗಳ ಸವಾಲಿಗೆ ಪ್ರತ್ಯುತ್ತರ ನೀಡಿದ ಆಸ್ಟ್ರೇಲಿಯಾ 207 ರನ್ ಗಳಿಗೆ ಸರ್ವಪತನಗೊಂಡು 24 ರನ್ ಗಳಿಂದ ಸೋಲು ಅನುಭವಿಸಿತ್ತು.

Tags: CrimefilmInternationalNationalpoliticsSports
ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram