ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವ ಸಂಸ್ಥೆ ಈ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಭಾರೀ ಕುಸಿತಕ್ಕೊಳಗಾಗಿದ್ದ ಮುಂಬಯಿ ಷೇರು ಮಾರುಕಟ್ಟೆ ಇಂದು ಮತ್ತೆ ತಲ್ಲಣಗೊಂಡಿದೆ.
ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕ ತಾತ್ಕಾಲಿಕವಾಗಿ ಯುರೋಪಿನ ಪ್ರವಾಸಿಗರಿಗೆ 30 ದಿನಗಳ ನಿರ್ಬಂಧವನ್ನು ಹೇರಿದ್ದು ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಅನ್ನು ವಿಶ್ವವ್ಯಾಪಿ ಎಂದು ಘೋಷಿಸಿದ್ದು, ಷೇರು ಮಾರುಕಟ್ಟೆ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿತು. ಇಂದು ಮುಂಜಾನೆ 11 ಗಂಟೆಗೆ ಸೆನ್ಸೆಕ್ಸ್ 2520.10 ಅಂಕಗಳಷ್ಟು ಕುಸಿತ ಕಂಡಿತು ಮತ್ತು ನಿಫ್ಟಿ 722.5 ಅಂಕಗಳಷ್ಟು ಕುಸಿತವನ್ನು ದಾಖಲಿಸಿತು.








