ಯುವ ಪ್ರತಿಭೆಗಳೇ ಹೆಚ್ಚಾಗಿರುವ ನವನಟ ಹಾಗೂ ನವನಿರ್ದೇಶಕರ ಹೊಸ ಚಿತ್ರವೊಂದು ಬೆಳ್ಳಿ ತೆರೆಗಪ್ಪಳಿಸಲು ಸಜ್ಜಾಗ್ತಿದೆ.
ಡಯಾಕ್ಸ್ ಎಂಟರ್ಟೈನ್ಮೆಂಟ್ ಅರ್ಪಿಸುತ್ತಿರುವ ಧೀರನ್ ಸಿನಿ ಸರ್ವೀಸಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಧೀರನ್ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ. (upendra singing a song in new kannada movie dheeran)
ಧೀರನ್ ಚಿತ್ರದಲ್ಲಿ ಉಪೇಂದ್ರ ಅವರು ರೈಸ್ ಲೈಕ್ ಎ ಸನ್ ಎಂಬ ಹಾಡನ್ನು ಹಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಹಾಡಿನತ್ತ ಸಿನಿ ಪ್ರಿಯರು, ಉಪ್ಪಿ ಅಭಿಮಾನಿಗಳಿಗೆ ವಿಶೇಷ ಒಲವಿದೆ.
ಇನ್ನೂ ಹೆಚ್ಚು ಸದ್ದು ಮಾಡುತ್ತಿರುವುದು ಉಪೇಂದ್ರ ಅವರ ಸಾಂಗ್ ಮೇಕಿಂಗ್ ವಿಡಿಯೋ.
ಇತ್ತೀಚಿಗೆ ಗುರುಕಿರಣ್ ಅವರ ಸ್ಟುಡಿಯೋದಲ್ಲಿ ಹಾಡು ಹಾಡುತ್ತಿರುವ ಮೇಕಿಂಗ್ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಸಕ್ಸಸ್ ಆಗಿದೆ.
ಇನ್ನೂ ಒಂದು ವಿಶೇಷತೆ ಅಂದ್ರೆ ಈ ಹಾಡಿನಲ್ಲಿ ಕನ್ನಡದ ನಾಲ್ಕು ದಿಗ್ಗಜರ ಆದರ್ಶಗಳನ್ನು ಎತ್ತಿ ಹಿಡಿಯಲಾಗಿದೆ.
ಸ್ಯಾಂಡಲ್ ವುಡ್ ನ ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಸಾಹಸ ಸಿಂಹ ಡಾ. ವಿಷ್ಣುವರ್ಧನ್, ವರನಟ ಡಾ. ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಷ್ , ಕರಾಟೆ ಕಿಂಗ್ ಶಂಕರ್ ನಾಗ್ ಅವರ ಆದರ್ಶಗಳ ಬಗ್ಗೆ ಈ ಹಾಡಿನಲ್ಲಿ ಅದ್ಭುತವಾಗಿ ವರ್ಣಿಸಲಾಗಿದೆ.
ಇನ್ನೂ ಚಿತ್ರದ ನಟ ಕಮ್ ಡೈರೆಕ್ಟರ್ ಆಗಿರುವ ಸ್ವಾಮಿ ವೈ ಬಿ ಎನ್ , ಮಿಮಿಕ್ರಿ ದಯಾನಂದ್ , ಗುರುಕಿರಣ್ , ಸಂಗೀತ ನಿರ್ದೇಶಕರು ಸಹ ಚಿತ್ರದ ಕಥೆ ಸಂಭಾಷಣೆ ಸಾಂಗ್ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಭರ್ಜರಿ ಚೇತನ್ , ಸಿಂಪಲ್ ಸುನಿ ಅವರ ಸಾಹಿತ್ಯವಿದ್ದು, ಚಿತ್ರದಲ್ಲಿ ನಾಯಕನಾಗಿರುವ ಸ್ವಾಮಿ ಅವರೇ ಆಕ್ಷನ್ ಕಟ್ ಹೇಳ್ತಿದ್ದಾರೆ. (upendra singing a song in new kannada movie dheeran)
ಸ್ಯಾಂಡಲ್ ವುಡ್ ನ ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಆರ್ ಎಸ್ ಗಣೇಶ್ ನಾರಾಯಣ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಂದೀಪ್ ಹೊನ್ನಾಳಿ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನೂ ಧೀರನ್ ಚಿತ್ರ ಈಗಾಗಲೇ ಸೆನ್ಸಾರ್ ಮಂಡಳಿ ಮುಂದೆ ಬರಲು ತಯಾರಾಗಿದೆ.