ತುಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸಿನಿ ಜರ್ನಿ ಶುರುಮಾಡಿ ಬಳಿಕ ಕನ್ನಡ ಚಿತ್ರರಂಗದಲ್ಲೂ ಮಿಂಚುತ್ತಿರುವ ನಿರ್ದೇಶಕ ವೀರೇಂದ್ರ ಶೆಟ್ಟಿ ಮುಂಬರುವ ಹೊಸ ಚಿತ್ರವನ್ನ ಘೋಷಣೆ ಮಾಡಿದ್ದರು. ಇದೀಗ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ತುಳುವಿನ ಚಾಲಿಪೋಲಿಲು ಚಿತ್ರದ ಮೂಲಕ ಖ್ಯಾತಿ ಗಳಿಸಿದ ಬಳಿಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದ ವೀರೇಂದ್ರ ಶೆಟ್ಟಿ ಕಾವೂರ್ ಅವರು ಕನ್ನಡದ ಸವರ್ಣ ಧೀರ್ಘ ಸಂಧಿ ಚಿತ್ರವನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದವರು.
ಇದೀಗ ತಮ್ಮ ಮೂರನೇ ಚಿತ್ರವನ್ನ ( 2ನೇ ತುಳು ಚಿತ್ರ) ಅನೌನ್ಸ್ ಮಾಡಿರುವ ವೀರೇಂದ್ರ ಅವರು ಟೈಟಲ್ ಬಹಿರಂಗಪಡಿಸಿದ್ದಾರೆ. ಈ ಚಿತ್ರಕ್ಕೆ ಮಗನೇ ಮಹಿಷ ಎಂದು ಶೀರ್ಷಿಕೆ ಇಟ್ಟಿದ್ದು, ಫೇಸ್ ಬುಕ್ ಪೇಜ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ನೆಟ್ಟಿಗರಿಂದ ವೀರೇಂದ್ರ ಅವರ ಪೋಸ್ಟ್ ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಚಿತ್ರಕ್ಕೆ ಶುಭ ಹಾರೈಸುತ್ತಿದ್ದಾರೆ. ಇನ್ನೂ ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ತಾರಾಬಳದ ಬಗ್ಗೆಯೂ ಮಾಹಿತಿ ಶೀಘ್ರದಲ್ಲಿ ಗೊತ್ತಾಗಲಿದೆ.
ತಮ್ಮ ಚಿತ್ರಗಳಲ್ಲಿ ಸಮಾಜಕ್ಕೆ ಉತ್ತಮ ಮೆಸೇಜ್ ಕೊಡೋ ಸ್ಟೋರಿ ಲೈನ್ ಅಳವಡಿಸುವುದು ªವೀರೇಂದ್ರ ಶೆಟ್ಟಿ ಅವರ ವಿಶೇಷತೆ. ಹೀಗಾಗಿ ಅವರ ಮುಂಬರುವ ಚಿತ್ರದ ಬಗ್ಗೆಯೂ ಹೆಚ್ಚಿನ ನಿರೀಕ್ಷೆಯಿದೆ.