ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಅವರ ನಟನೆಯ ಹೊಸ ಸಿನಿಮಾ ‘ಶುಗರ್ ಲೆಸ್’ ನ ಶೂಟಿಂಗ್ ಇದೇ ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಹಲವು ದಿನಗಳ “ಲಾಕ್ ಡೌನ್ ” ಅತ್ಯಂತ ಉತ್ಸಾಹದಿಂದ ಮತ್ತೆ ಚಿತ್ರತಂಡ ಶೂಟಿಂಗ್ ಆರಂಭಿಸಿದೆ.
ದಿಯಾ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ಪೃಥ್ವಿ ಅಂಬರ್ ಸಿನಿಮಾದ ನಾಯಕರಾಗಿದ್ದು ಪ್ರಿಯಾಂಕಾ ತಿಮ್ಮೇಶ್ ಸಿನೆಮಾದ ನಾಯಕಿಯಾಗಿದ್ದಾರೆ. ಇನ್ನೂ ಚಿತ್ರಕ್ಕೆ ಶಶಿಧರ್ ಕೆ.ಎಂ ಅವರು ಆಕ್ಷನ್ ಕಟ್ ಹೇಳ್ತಾಯಿದ್ದು, ಇದು ವರ ±ಶಿಧರ್ ಅವರ ಡೈರೆಕ್ಷನ್ ನ ಚೊಚ್ಚಲ ಸಿನಿಮಾವಾಗಿದೆ. ಅಷ್ಟೇ ಅಲ್ಲದೇ ಚಿತ್ರಕ್ಕೆ ಶಶಿಧರ್ ಅವರೇ ಬಂಡವಾಳ ಹುಡುತ್ತಿರೋದು ವಿಶೇಷ.
ಚಿತ್ರಕ್ಕೆ ಅನೂಪ್ ಸಿಳಿನ್ ಅವರ ಸಂಗೀತವಿದ್ದು, ರಾಮಾ ರಾಮಾ ರೇ ಕ್ಯಾಮೆರಾ ಮನ್ ಲವಿತ್ ಈ ಸಿನಿಮಾದ ಛಾಯಾಗ್ರಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನ್ ಅವರ ಸಹಕಾರವಿದ್ದು, ಕೊರೊನಾ ಬಿಕ್ಕಟ್ಟು ಮುಗಿಯುತ್ತಿದ್ದಂತೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.








