ಕನ್ನಡಿಗ ಮಯಾಂಕ್ ಅಗರ್ವಾಲ್ ಅದ್ಭುತ ಆಟಕ್ಕೆ ಚಂದನವನದ ಕಿಚ್ಚ ಸುದೀಪ್ ಫಿದಾ ಆಗಿದ್ದಾರೆ.
ಭಾನುವಾರ ನಡೆದ ಡೆಲ್ಲಿ ಮತ್ತು ಪಂಜಾಬ್ ತಂಡಗಳ ನಡುವಿನ ಪಂದ್ಯದಲ್ಲಿ ಡೆಲ್ಲಿ ಗೆಲುವಿನ ನಗೆ ಬೀರಿತು.
ಆದ್ರೆ ಪಂಜಾಬ್ ತಂಡ ಕ್ರಿಕೆಟ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತ್ತು.
ಅದರಲ್ಲೂ ಕನ್ನಡಿಗ ಮಯಾಂಕ್ ಅಗರ್ವಾಲ್ ಹೊಡಿಬಡಿ ಆಟಕ್ಕೆ ಅಭಿಮಾನಿಗಳು ಟಿವಿ ಮುಂದೆ ಕುಂತು ಸಿಳ್ಳೆ, ಚಪ್ಪಾಳ ಹೊಡೆದಿದ್ದು ಸತ್ಯ.

ಪಂದ್ಯವನ್ನ ಗೆಲ್ಲಲು ಮಯಾಂಕ್ ತೋರಿದ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಒಂದು ಕಡೆ ವಿಕೆಟ್ಸ್ ಬೀಳುತ್ತಿದ್ದರೂ ತಂಡವನ್ನು ಗೆಲುವಿನತ್ತ ಕೊಂಡೋಯ್ದ ಮಯಾಂಕ್ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅದರಂತೆ ಸ್ಯಾಂಡಲ್ ವುಡ್ ಕಿಚ್ಚ ಕೂಡ ಮಯಾಂಕ್ ಆಟ ಮನಸೋತಿದ್ದು, ಟ್ವಿಟ್ಟರ್ ನಲ್ಲಿ ಅಗರ್ವಾಲ್ ಗುಣಗಾನ ಮಾಡಿದ್ದಾರೆ.
ಸುದೀಪ್ ಟ್ವೀಟ್ : ಉತ್ತಮ ಆಟ ಆಡಿರುವ ಮಯಾಂಕ್ ಅಗರ್ವಾಲ್ ಬಗ್ಗೆ ನಮಗೆ ಹೆಮ್ಮೆ ಇದೆ.
ಮೂರು ಸೂಪರ್ ಓವರ್ ನಲ್ಲಿ ನೀವು ಇಲ್ಲದಿದ್ರೂ ಕೋವಿಡ್-19 ಸಂದರ್ಭದಲ್ಲಿ ನಿಮ್ಮ ಆಟ ಅತ್ಯಂತ ಮನರಂಜನೆಯನ್ನ ನೀಡಿತು ಗೆಳೆಯ.
ಚಿಯರ್ಸ್ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.








