ಬೆಂಗಳೂರು : ಕೊರೊನಾ ಸಹವಾಸ ಸಾಕಪ್ಪ. ಇದರಿಂದ ಬಚಾವ್ ಆಗೋದೇ ಕಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಕಲಾಪದಲ್ಲಿ ಸಂತಾಪ ಸೂಚನೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಈ ಕೊರೊನಾ ಇದ್ಯಲ್ಲಾ ಇದು ಬಹಳ ಅಪಾಯಕಾರಿ. ಅದರ ಬಗ್ಗೆ ನನಗೆ ಚೆನ್ನಾಗಿ ಗೊತ್ತು.
ಈಶ್ವರಪ್ಪನಿಗೂ ಬಂದಿತ್ತು ಅಂತ ಕಾಣಿಸುತ್ತೆ. ನಮ್ಮ ಅಧ್ಯಕ್ಷನಿಗೂ ಕೊರೊನಾ ಬಂದ ನಂತರ ಅಲರ್ಟ್ ಆಗಿದ್ದಾರೆ.
ಈ ಕಾಯಿಲೆ ಮಾನವೀಯ ಸಂಬಂಧವನ್ನೇ ಕಟ್ ಮಾಡುತ್ತೆ ಎಂದು ಹೇಳಿದರು.
ನನಗೆ, ನನ್ನ ಹೆಂಡತಿಗೆ, ಮಗನಿಗೆ ಕೊರೊನಾ ಬಂದುಬಿಟ್ಟಿತ್ತು. ಯಾರೂ ನಮ್ಮ ನೋಡಂಗಿಲ್ಲ, ನಮ್ಮ ಹತ್ರ ಬರಂಗಿಲ್ಲ.
ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದವರಿಗೂ ಬಂತು. ಮೈಸೂರಿನಿಂದ ಕರೆತಂದು ಅಡಿಗೆ ಮಾಡಿಸುವಂತಾಯ್ತು.
ಇದರ ಸಹವಾಸ ಸಾಕಪ್ಪ. ಇದರಿಂದ ಬಚಾವ್ ಆಗೋದೇ ಕಷ್ಟ ಎಂದು ತಿಳಿಸಿದರು.
ಸೋಶಿಯಲ್ ಡಿಸ್ಟನ್ಸ್, ಮಾಸ್ಕ್ ಹಾಕುವುದು ಕಡ್ಡಾಯ.
ಇದರಿಂದಷ್ಟೇ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದು ಎಂದ ಸಿದ್ದರಾಮಯ್ಯ ಕೊರೊನಾ ಬಂದವರು ಭಯಪಡಬೇಕಿಲ್ಲ ಎಂದು ಸಲಹೆ ನೀಡಿದರು.








