ಐಪಿಎಲ್ ಪಂದ್ಯಾಟ – ಶುಭಾರಂಭ ಮಾಡಿದ ಆರ್ ಸಿ ಬಿ
ದುಬೈ, ಸೆಪ್ಟೆಂಬರ್22: ದುಬೈ ಇಂಟರ್ನ್ಯಾಷನಲ್ ಜನ ರಹಿತ ಸ್ಟೇಡಿಯಂನಲ್ಲಿ ನಡೆದ 3 ನೇ ಐಪಿಎಲ್ ಪಂದ್ಯಾಟದಲ್ಲಿ ಆರ್ ಸಿ ಬಿ ತಂಡ ಸನ್ ರೈಸರ್ಸ್ ವಿರುದ್ಧ 10 ರನ್ ಗಳಿಂದ ವಿಜಯಿಯಾಗಿದೆ. ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ಆರ್ ಸಿ ಬಿಯ ಆರಂಭಿಕ ಆಟಗಾರರು ಪಡಿಕ್ಕಲ್ ಮತ್ತು ಫಿಂಚ್ ಮೊದಲ ವಿಕೆಟ್ ಗೆ ಹತ್ತು ಓವರ್ ಗಳಲ್ಲಿ 90 ರನ್ ಗಳ ಜೊತೆಯಾಟ ನೀಡಿದರು. ಕರ್ನಾಟಕದ ದೇವದತ್ತ ಪಡಿಕ್ಕಲ್ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದರು. ನಂತರ ಬಂದ ಕೊಹ್ಲಿ ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದು ಕಡೆ ಎಬಿಡಿ ಮಿಂಚಿನ ಅರ್ಧ ಶತಕ ಗಳಿಸಿದಲ್ಲದೆ ತಂಡದ ಮೊತ್ತವನ್ನು 150 ರ ಗಡಿದಾಟಿಸಿದರು. ಕೊನೆಗೆ ತನ್ನ ಇಪ್ಪತ್ತು ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ನು ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಮೊತ್ತದ ಬೆನ್ನಟ್ಟಿದ ಸನ್ ರೈಸರ್ಸ್ ಜೊನ್ನಿ ಬೈರ್ಸ್ಟೌ ಅರ್ಧ ಶತಕ ಮತ್ತು ಮನೀಶ್ ಪಾಂಡೆ 34 ರನ್ ಗಳನ್ನು ಸೇರಿಸಿದರು. ಆದರೆ ಆರ್ ಸಿ ಬಿ ಯಾ ಚಾಹಲ್ ದಾಳಿಗೆ ಮುಗ್ಗರಿಸಿದ ಸನ್ ರೈಸರ್ಸ್ ಆಟಗಾರರು 153 ತನ್ನ ಎಲ್ಲ ವಿಕೆಟ್ ಕಳೆದು ಕೊಂಡು 10 ರನ್ ಗಳ ಸೋಲನ್ನು ಕಂಡರು. ಆರ್ ಸಿ ಬಿ ಪರ ಸೈನಿ ಮತ್ತು ದುಬೆ ತಲಾ 2 ವಿಕೆಟ್ ಪಡೆದರು.